ಜಿಲ್ಲೆ

ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ

ನಾಗೇಶ ಎಸ್

ಬನ್ನೂರು: ಕಾವೇರಿ ಜಲಾನಯನ ಪ್ರದೇಶಗಳಾದ ಬನ್ನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ವರ್ಗಕ್ಕೆ ಕೃಷಿಯೇ ಜೀವನಾಧಾರವಾಗಿದೆ. ಆದರೆ ನೀರಿನ ಅಭಾವದಿಂದ ಬೆಳೆಗಳು ಒಣಗಲು ಆರಂಭಿಸಿದ್ದು, ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಆ.7ರಂದು ಸಂತೇಮಾಳದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ(ಮೂಲಸಂಘಟನೆ) ಜಿಲ್ಲಾಧ್ಯಕ್ಷ ನಾರಾಯಣ್ ತಿಳಿಸಿದರು.

ಉತ್ತಮ ಮಳೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿ ಹಂತಕ್ಕೆ ತಲುಪುತ್ತಿರುವುದು ರೈತರಲ್ಲಿ ಸಂತಸವನ್ನುಂಟು ಮಾಡಿದೆ. ಆದರೆ ನಾಲೆಗಳಿಗೆ ನೀರು ಹರಿಸದಿರುವುದರಿಂದ ನಾಟಿಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ರೈತರು ಭಯಭೀತರಾಗಿದ್ದಾರೆ. ಕೃಷಿ ಭೂಮಿಗೆ ಸಕಾಲದಲ್ಲಿ ನೀರು ಹರಿದಿದ್ದರೆ ಬೆಳೆ ಬೆಳೆಯಲು ಆಗದು. ಬೆಳೆ ಬೆಳೆಯದಿದ್ದರೆ ರೈತನ ಜೀವನಾಧಾರಕ್ಕೆ ಜೀವನಾಂಶವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬೀಡನಹಳ್ಳಿ ವೆಂಕಟೇಶ್, ಬೆಟ್ಟಹಳ್ಳಿ ಶಿವರಾಂ, ಕುಚೇಲ, ರಂಗಸ್ವಾಮಿ, ಅತ್ತಹಳ್ಳಿ ರಾಜು, ಚೇತನ್, ಚಿನ್ನಸ್ವಾಮಿ, ಎಂ. ವಿ. ಕೃಷ್ಣಪ್ಪ ಸೇರಿದಂತೆ ಪ್ರಮುಖರಿದ್ದರು.