ಶಹಾಬಾದ್: ಶ್ರಾವಣ ಮಾಸದ ನಿಮಿತ್ತ ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಕೈಲಾಸ ಮಂಟಪದಲ್ಲಿ ನಿತ್ಯವೂ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿವೆ ಎಂದು ಶ್ರೀಮಠ ವಕ್ತಾರ ಮಹಾದೇವ ಗಂವಾರ್ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಶ್ರೀ ಕೋರಿಸಿದ್ಧೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾ, ಅಭಿಷೇಕ ನಡೆದವು. ಸಂಜೆ ಹಲವು ಗಾಯಕರಿಂದ ವಿಶೇಷ ಗಾಯನ ನಡೆಯಿತು. ವೈದಿಕರ ಮಂತ್ರಘೋಷ, ಭಕ್ತರ ಜೈಘೋಷದ ಮಧ್ಯೆ ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಇಷ್ಟಲಿಂಗ ಪೂಜೆ ನೆರವೇರಿಸಿದರು. ಬಳಿಕ ಅಪಾರ ಭಕ್ತರು ಶ್ರೀಗಳಿಗೆ ಪುಷ್ಪವೃಷ್ಟಿ ಸುರಿಸಿ, ಪಾದಪೂಜೆ ನೆರವೇರಿಸಿ ಕೃತಾರ್ಥರಾದರು.
ರಾಜ್ಯ ಸೇರಿ ನೆರೆಯ ಸಾವಿರಾರು ಭಕ್ತರು ನಿತ್ಯ ಶ್ರೀಮಠಕ್ಕೆ ಭೇಟಿ ನೀಡಿತ್ತಿದ್ದು, ಭಜನೆ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿವೆ. ಸೆ.7ರಂದು ಶ್ರೀಮಠದಲ್ಲಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ, ಭಕ್ತರಿಗೆ ಗುರುದೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.