ನಾಲತವಾಡದ ಹಟ್ಟಿಯವರ ಓಣಿಯ ದುರ್ಗಮ್ಮ ದೇವಿಯ ಜಾತ್ರೆ ನಿಮಿತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು. 
ಜಿಲ್ಲೆ

ನಾಲತವಾಡದಲ್ಲಿ ಗ್ರಾಮ ದೇವತೆಯರ ಜಾತ್ರೆ

ನಾಲತವಾಡ: ಪಟ್ಟಣದ ಗ್ರಾಮ ದೇವತೆಯರಾದ ದ್ಯಾಮವ್ವ ಹಾಗೂ ಗದ್ದೆಮ್ಮ ದೇವಿಯರ ಜಾತ್ರೆಯ ಜೊತೆಗೆ ಹಟ್ಟಿಯವರ ಓಣಿಯ ದುರ್ಗಾದೇವಿ, ನಾಡಗೌಡರ ಓಣಿಯ ಕಂಠಿ ದುರ್ಗಮ್ಮ, ಗದ್ದೆಮ್ಮನ ಕಟ್ಟಿಯ ಗದ್ದೆಮ್ಮ ದೇವಿಯರ ಜಾತ್ರೆಗಳೂ ಅತ್ಯಂತ ಸಂಭ್ರಮದಿಂದ ಮಂಗಳವಾರ ಜರುಗಿದವು.

ನಸುಕಿನಲ್ಲಿಯೇ ಐದು ದೇವತೆಗಳ ಆರಾಧಕರು, ಭಕ್ತರು ಗಂಗಾಸ್ಥಳಕ್ಕೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ನದಿಗೆ ತೆರಳಿ ಒಂದು ನೂರಾ ಒಂದು ಕುಂಭದಲ್ಲಿ ನೀರನ್ನು ತಂದು ದೇವಿಯರ ದೇಗುಲಕ್ಕೆ ತೆರಳಿ ಅಭಿಷೇಕ, ಅರಿಸಿಣ ಕುಂಕುಮಾರ್ಚನೆ, ಬಿಲ್ವ ಅರ್ಚನೆ,ಪುಷ್ಪಾರ್ಚನೆ ಮಾಡಿಸಿದರು.

ಮಹಿಳೆಯರಿಗೆ ಉಡಿ ತುಂಬಲಾಯಿತು. ಊರ ಹಿರಿಯರಿಂದ ಗ್ರಾಮ ದೇವತೆಯರಿಗೆ ವಸ್ತ್ರ, ದಂಡೆ ಹಾರ, ತೊಟ್ಟಿಲು ಸಮರ್ಪಣಿ ಜರುಗಿತು.

ದೇವಿಯರ ಮೆರವಣಿಗೆ: ಹಟ್ಟಿಯವರ ಓಣಿಯ ದುರ್ಗಮ್ಮ ದೇವಿಯ ಮೆರವಣಿಗೆ ಖಾನಭಾವಿ ಓಣಿ, ಬಜಾರ್, ಗಣಪತಿ ಚೌಕ, ಗುಡಿ ಓಣಿ, ದೇಶಮುಖರ ಓಣಿಯ ಮಾರ್ಗವಾಗಿ ಹಟ್ಟಿಯವರ ಓಣಿ ತಲುಪಿತು.

ಮಹಿಳೆಯರ ಕಳಶ, ಜಾನಪದ ನೃತ್ಯಗಳು, ಕಲಾ ತಂಡಗಳು ಜಾತ್ರೆ ಮೆರುಗನ್ನು ಮತ್ತಷ್ಟು ಹೆಚ್ಚಿಸಿದವು. ನಂತರದಲ್ಲಿ ದ್ಯಾಮವ್ವ ಹಾಗೂ ಗದ್ದೆಮ್ಮ ದೇವಿಯರ ಮೆರವಣಿಗೆ ನಡೆಯಿತು.

ಶಂಕರಾವ ದೇಶಮುಖ, ಗುರುಪ್ರಸಾದ ದೇಶಮುಖ, ಬಾಬು ಕ್ಷತ್ರಿ, ಮಾರುತಿ ಗುರಿಕಾರ, ಬಾಲಪ್ಪ ಹಟ್ಟಿ, ಭೀಮಣ್ಣ ಗುರಿಕಾರ, ಗೌರೀಶ ದೇಶಮುಖ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಮರಪ್ಪ ಸೀರಿ, ಸಂಗಣ್ಣ ಬಾರಡ್ಡಿ, ಶಿಕ್ಷಕ ಬಸವರಾಜ ಮೇಲಶೀಮಿ, ಬಸವರಾಜ ಹಳ್ಳಿ, ಹನುಮಂತ ಹಟ್ಟಿ, ಹುಲಗಪ್ಪ ಹಳ್ಳಿ, ಪರುಸುರಾಮ ಹಳ್ಳಿ, ಆದಪ್ಪ ಕ್ಷತ್ರಿ, ಮಂಜುಳಾ ವಾಲಿ, ಸಂಗಪ್ಪ ಯರಗುಂಟಿ, ಪ್ರಮೋದ ಯರಗುಂಟಿ, ಶಂಕ್ರಣ್ಣ ಟಕ್ಕಳಕಿ, ಶಾಂತಗೌಡ ನಾಡಗೌಡ, ಅಮರೇಶ ಹಟ್ಟಿ, ಬಾಲು ಹಟ್ಟಿ, ಯಮನಪ್ಪ ಕ್ಷತ್ರಿ ಹಾಗೂ ಹಟ್ಟಿ ಓಣಿ, ದೇಶಮುಖ ಓಣಿ, ರಡ್ಡೇರ ಪೇಟೆಯ ಭಕ್ತರು ಇದ್ದರು.