ಅಥಣಿ ಗ್ರಾಮೀಣ: ಮಹಿಳೆಯರು ಸ್ವಾವಲಂಬಿಯಾಗಿ ಬದುಕುವ ಛಲ ಹೊಂದಬೇಕು. ಅಂದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಪಂ ಮಾಜಿ ಸದಸ್ಯೆ ಡಾ. ಸವಿತಾ ಪೂಜಾರಿ ಕರೆ ನೀಡಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕಿ ಆರತಿ ಪಾಟೀಲ ಮಾತನಾಡಿ, ಮಹಿಳೆಯರಿಗಾಗಿ ಸರ್ಕಾರ ನೀಡುತ್ತಿರುವ ಯೋಜ ನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರೊ. ದಯಾನಂದ, ಪ್ರಾಚಾರ್ಯ ಪರಪ್ಪ ಮಗದುಮ್ಮ ಮಾತನಾಡಿದರು. ಡಾ.ಸವಿತಾ ಪೂಜಾರಿ ಬಡ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿದರು. ಡಾ.ವಿದ್ಯಾ ಕೋಲಕಾರ, ಡಾ. ಭಾಗ್ಯವತಿ ಎಂ., ಮೀನಾ ಕುಲಕರ್ಣಿ, ಶೈಲಾಶ್ರೀ ಕುಲಕರ್ಣಿ, ಲಕ್ಷ್ಮಿ ಆರ್., ರಶ್ಮೀ ಹಾದಿಮನಿ, ಮಂಜುಳಾ ಹಳ್ಳೋಳ್ಳಿ, ಕೆ.ಟಿ. ಶೆಡಶಾಳ, ಸಿದ್ಧರಾಮ ಗಡದೆ, ಅಪ್ಪಾಸಾಹೇಬ ಕನಬೂರ, ವಿನೋದ ಮೇತ್ರಿ, ಡಾ. ಪ್ರಭಾಕರ ಖ್ಯಾಡಿ, ತೇಜಸ್ವಿನಿ ಶಿರಗುರ, ನಿಖಿತಾ ಕಾಡದೇವರಮಠ, ಐಶ್ವರ್ಯ ಶಾನವಾಡ ಇದ್ದರು.