ಜಿಲ್ಲೆ

ನಾರಿಯರ ಪಾತ್ರ ಪ್ರಮುಖ

ವಿದ್ಯಾ ಶೆಟ್ಟನಗೌಡ್ರ

ಅಥಣಿ: ಕುಟುಂಬ ನಿರ್ವಹಣೆ ಜತೆಗೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯ ಪಾತ್ರ ಪ್ರಮುಖವಾಗಿದೆ ಎಂದು ಸಮಾಜ ಸೇವಕಿ ಜಯಶ್ರೀ ಮಹಾಜನ ಹೇಳಿದರು.

ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಹಿಳಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪನ್ಯಾಸಕಿ ಡಾ.ಪ್ರಿಯಂವದಾ ಹುಲಗಬಾಳಿ ಮಾತನಾಡಿ, ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದರು. ಸಾಧಕಿಯರನ್ನು ಸತ್ಕರಿಸಲಾಯಿತು.

ಶೈಲಜಾ ನೇಮಗೌಡ, ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಯಶೋಧಾ ಕುಲಗುಡೆ, ನೀಲಾಂಬಿಕಾ ನೇಮಗೌಡ, ಐರಾವತಿ ಕೌಲಾಪುರೆ, ಪ್ರಭಾ ಬೋರಗಾಂವಕರ, ಶಶಿಕಲಾ ಹರ್ತಿ, ಮೃಣಾಲಿನಿ ದೇಶಪಾಂಡೆ, ಗೀತಾ ತೋರಿ ಇತರರಿದ್ದರು.