ಮೂಡಿಗೆರೆಯ ಮಾಜಿ ಸಚಿವೆ ಮೋಟಮ್ಮ ಅವರ ನಿವಾಸದಲ್ಲಿ ವಿಜಯವಾಣಿ ದಿನಪತ್ರಿಕೆಯ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡಿಪ್ ಆಯ್ಕೆ ಮಾಡಲಾಯಿತು. ಮಾಜಿ ಸಚಿವೆ ಮೋಟಮ್ಮ, ನವ್ಯಶ್ರೀ, ಸುಗತ್, ಆತಿತ್ಯಾ, ಶ್ರುತಿ ಇತರರಿದ್ದರು. 
ಜಿಲ್ಲೆ

ನಾರಿ ಸ್ಯಾರಿ ಲಕ್ಕಿ ಡಿಪ್ ಪತ್ರಿಕೆ ಓದಲು ಪ್ರೋತ್ಸಾಹ

ಮೂಡಿಗೆರೆ: ಕನ್ನಡದ ನಂಬರ್ 1 ದಿನಪತ್ರಿಕೆ ‘ವಿಜಯವಾಣಿ’ಯ ನಾರಿ ನಿನಗೊಂದು ಸ್ಯಾರಿ ಕೂಪನ್ ಲಕ್ಕಿ ಡ್ರಾ ಕಾರ್ಯಕ್ರಮ ಮಾಜಿ ಸಚಿವೆ ಮೋಟಮ್ಮ ಅವರ ನಿವಾಸದಲ್ಲಿ ಮಂಗಳವಾರ ನಡೆಯಿತು. ಮೋಟಮ್ಮ ಮೊದಲ ಕೂಪನ್ ಎತ್ತುವ ಮೂಲಕ ಸ್ಯಾರಿ ಪಡೆಯುವ ನಾರಿಯನ್ನು ಆಯ್ಕೆ ಮಾಡಿದರು. ಅವರೊಂದಿಗೆ ಎಎಸ್‌ಎನ್ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿನಿಯರು ಪಾಲ್ಗೊಂಡು ಇನ್ನೂ 4 ಕೂಪನ್ ಎತ್ತುವ ಮೂಲಕ ಬಹುಮಾನಕ್ಕೆ ನಾರಿಯರನ್ನು ಆಯ್ಕೆ ಮಾಡಿದರು.

ನಾರಿ ನಿನಗೊಂದು ಸ್ಯಾರಿ ಲಕ್ಕಿ ಡಿಪ್ ಸ್ಪರ್ಧೆ 2025 ಫೆ.6ರಿಂದ ಮಾ.23ರವರೆಗೆ ನಡೆದಿದೆ. ಪ್ರತಿದಿನ ವಿಜಯವಾಣಿ ಪತ್ರಿಕೆಯಲ್ಲಿ ಕೂಪನ್ ಮುದ್ರಿಸಲಾಗಿತ್ತು. 45 ದಿನಗಳ ಸ್ಪರ್ಧೆ ಮುಕ್ತಾಯಗೊಂಡ ಬಳಿಕ ಏಪ್ರಿಲ್‌ನಲ್ಲಿ ಲಕ್ಕಿ ಡ್ರಾ ನಡೆಸಿ ವಿಜೇತರ ಹೆಸರು ಘೋಷಿಸಲಾಗುವುದು ಎಂದು ಕೂಪನ್‌ನಲ್ಲಿ ತಿಳಿಸಲಾಗಿತ್ತು. ಪ್ರತಿದಿನ ಒಂದೊಂದು ಪ್ರಶ್ನೆಯನ್ನು ಕೂಪನ್ ಮೂಲಕ ಕೇಳಲಾಗಿತ್ತು. ಸರಿ ಉತ್ತರ ಬರೆದ 5 ಮಂದಿಯರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ವಿಜೇತರಿಗೆ ಸೀರೆ ನೀಡುವುದಾಗಿ ತಿಳಿಸಲಾಗಿತ್ತು.

ವಿಜೇತರು: ಶ್ವೇತಾ ದಿಲೀಪ್-ಮೂಡಿಗೆರೆ ತಾಲೂಕು ಬಸ್ಕಲ್‌ನ ಪುರ ಗ್ರಾಮ ರೇಣುಕಾ-ಕಳಸ ತಾಲೂಕು ಹೊರನಾಡು,ದೀಪಶ್ರೀ-ಮೂಡಿಗೆರೆಯ ವಿದ್ಯಾನಗರ, ವೈ.ಶಾಂತಲಾ-ಕಳಸ ತಾಲೂಕು ಹಿರೇಬೈಲ್, ಭವಾನಿ-ಕಳಸ ತಾಲೂಕು ಗೌರಿಮಕ್ಕಿ.