ಬಂಗಾರಪೇಟೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಸೋಲಿಸಲು ನಾನು ಶಕ್ತಿಮೀರಿ ಶ್ರಮಿಸುವೆ. ಇದು ನನ್ನ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಪಟ್ಟಣದ ಪಟ್ಟಾಭಿಷೇಕೋದ್ಯಾನವನದಲ್ಲಿ ಪುರಸಭೆ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಚುನಾವಣೆ ಸಮಯದಲ್ಲಿ ನಾನು ನನ್ನ ಪಕ್ಷದ ಪರವಾಗಿ ಕೆಲಸ ಮಾಡುವೆ, ಆಗ ಇಲ್ಲಿನ ಶಾಸಕರನ್ನು ಸೋಲಿಸಲು ಶಕ್ತಿ ಮೀರಿ ಕೆಲಸ ಮಾಡುವೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣಿಗಳು ರಾಜಕೀಯದ ಕೆಲಸ ಮಾಡಬೇಕು. ಉಳಿದ ಸಮಯದಲ್ಲಿ ೇತ್ರಗಳ ಅಭಿವೃದ್ಧಿ ಕಡೆ ಗಮನ ನೀಡಬೇಕು. ನಾನು ನನ್ನ ಚುನಾವಣೆಯಲ್ಲಿ ಕೇವಲ 15ದಿನ ಮಾತ್ರ ರಾಜಕೀಯ ತಂತ್ರಗಾರಿಕೆ ಮಾಡುವೆ ಅಷ್ಟೇ. ಅದನ್ನು ಎಲ್ಲರೂ ಪಾಲಿಸಬೇಕೆಂದು ಕಿವಿಮಾತು ಹೇಳಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಯಾರೂ ರಾಜಕೀಯ ಮಾಡದೆ ಒಂದಾಗಿ ಕೆಲಸ ಮಾಡಿದರೆ ಅದು ಆರೋಗ್ಯಯುತ ಬೆಳೆವಣಿಗೆಯಾಗುತ್ತದೆ, ಅದು ಬಿಟ್ಟು ಕಚ್ಚಾಡಿದರೆ ಏನು ಉಪಯೋಗ? ಇಂದಿನ ಕಾರ್ಯಕ್ರಮದಲ್ಲಿ ಗೊಂದಲ ನಿರ್ಮಾಣವಾಗಲು ಶಾಸಕರು ಕಾರಣ. 12ಗಂಟೆಗೆ ಕಾರ್ಯಕ್ರಮವಿದ್ದರೆ ಬೆಳಗ್ಗೆ 10ಗಂಟೆಗೆಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ತಂದು ಕೂರಿಸಿ ಬಿಜೆಪಿ ಕಾರ್ಯಕರ್ತರಿಗೆ ಕುರ್ಚಿ ಸಿಗದಂತೆ ಮಾಡಿದ್ದು, ಅದೂ ಒಂಥರಾ ಒಳ್ಳೆದಾಗಿದೆ, ಅವರು ಹಾಗೆ ಮಾಡಿದ್ದಕ್ಕೆ ನಮ್ಮ ಕಾರ್ಯಕರ್ತರು ವೇದಿಕೆ ಮುಂಭಾಗದಲ್ಲಿ ಕೂರುವಂತಾಗಿದೆ ಎಂದರು.
ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಇಂದಿನ ಸಭೆಯಲ್ಲಿ ನಡೆದ ಹೈಡ್ರಾಮ ಅಸಮಾಧಾನ ತಂದಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಕಿತ್ತಾಟ ನಡೆದಿರುವುದು ಯಾರಿಗೂ ಶೋಭೆ ತರುವುದಿಲ್ಲ. ಸಚಿವರು ಬಂದಾಗ ಕೂಗಾಟ ಚೀರಾಟ ನಡೆದಿದೆ. ಸಣ್ಣ&ಪುಟ್ಟ ತಪ್ಪುಗಳು ಸಹಜ. ಅದನ್ನು ಸರಿಪಡಿಸಿಕೊಂಡು ಹೋಗಬೇಕು. ಸ್ಥಳಿಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹ ಕೆಲಸ ಹಿಂದೆ ಬಿದ್ದಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅಧಿಕಾರಿಗಳು ರ್ನಿಲಕ್ಷ$್ಯ ಮಾಡದೆ ವಸೂಲಿ ಮಾಡಬೇಕೆಂದು ಸೂಚಿಸಿದರು.
ಸಚಿವರು ಮತ್ತು ಸಂಸದರು ವೇದಿಕೆಯಿಂದ ನಿರ್ಗಮಿಸಿದ ಬಳಿಕ ಶಾಸಕ ನಾರಾಯಣಸ್ವಾಮಿ ಮಾತನಾಡಿ, ಕಳೆದ 9 ವರ್ಷಗಳಿಂದ ಬಂಗಾರಪೇಟೆ ತಾಲೂಕಿನಲ್ಲಿ 14 ಹಾಸ್ಟೆಲ್, 40 ಶಾಲೆ, ಡಬಲ್ ರಸ್ತೆ, ಆಸ್ಪತ್ರೆ ಸೇರಿ 2000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಮಾಡಲಾಗಿದೆ. ತಾವೇನು ಮಾಡಿದ್ದೀರಿ ಮುನಿಸ್ವಾಮಿ, ಊರೂರಿಗೆ ಬಂದು ಯುವಕರನ್ನು ದಿಕ್ಕು ತಪ್ಪಿಸಿ, ಹಾಳು ಮಾಡಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಸಮಾಜ ಹಾಳು ಮಾಡುತ್ತಿದ್ದೀರಿ. ಪುರಸಭೆ ಕಟ್ಟಡಕ್ಕೆ ನಿಮ್ಮ ಕೊಡುಗೆ ಶೂನ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕಟ್ಟಡಕ್ಕೆ ಅನುಮೋದನೆ ಆಗಿರೋದು. ಕಟ್ಟಡ ನಿರ್ಮಾಣ ಆಗಬಾರದು ಎಂದು ಕೆಲವು ಬ್ರೋಕರ್ಗಳ ಮುಖಾಂತರ ಕೋರ್ಟ್ನಲ್ಲಿ ಸ್ಟೇ ತರಲು ಹೋಗುತ್ತೀರಿ. ಬೋಗಸ್ ದಾಖಲೆಗಳನ್ನು ಸೃಷ್ಟಿ ಮಾಡುವ ಹಾಗೂ ರೈತರ ರಕ್ತ ಹೀರುವ ತಹಸೀಲ್ದಾರ ಅವರನ್ನು ಇಟ್ಟುಕೊಂಡಿದ್ದೀಯ. ಸಮಯ ಬಂದಾಗ ಕಾಂಗ್ರೆಸ್ನಿಂದ ಭ್ರಷ್ಟ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ಸಭೆ ಮಾಡಿ ಎಲ್ಲವನ್ನು ಬಿಚ್ಚಿ ಇಡುತ್ತೇನೆ ಎಂದು ಸಂಸದರ ವಿರುದ್ಧ ನಾರಾಯಣಸ್ವಾಮಿ ಕಿಡಿಕಾರಿದರು.
ಪೌರಾಧ್ಯೆ ಫರ್ಜಾನ ಸುಹೇಲ್, ಎಂಎಲ್ಸಿ ಅನಿಲ್ ಕುಮಾರ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಕೇಶ್ಕುಮಾರ್, ಕೆಜಿಎಫ್ಎಸ್ಪಿ ಧರಣಿದೇವಿ, ಡಿವೈಎಸ್ಪಿ ಮುರಳೀಧರ್ ಮತ್ತಿತರರು ಇದ್ದರು.
ಕಾರ್ಯಕರ್ತರ ನಡುವೆ ಮಾತಿನ ವಾಗ್ವಾದ ಸಭೆ ಅರ್ಧಕ್ಕೆ ಸ್ಥಗಿತ
ಬಂಗಾರಪೇಟೆ: ಪುರಸಭೆ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಮಾತಿನ ವಾಗ್ದಾಳಿಯಿಂದ ಸಮಾರಂಭ ಅರ್ಧಕ್ಕೆ ಸ್ಥಗಿತಗೊಂಡು, ಬಳಿಕ ನಡೆಯಿತು.
ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಕಾರ್ಯಕ್ರಮ ಶುರುವಾಗುವ ಎರಡು ಗಂಟೆ ಮೊದಲೇ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ಬೆಂಬಲಿಗರನ್ನು ಎಲ್ಲ ಕುರ್ಚಿಗಳ ಮೇಲೆ ಕೂರಿಸಿ ಬಿಜೆಪಿ ಕಾರ್ಯಕರ್ತರಿಗೆ ಕುರ್ಚಿಗಳು ಸಿಗದಂತೆ ಮಾಡಿದ್ದರು. ಉಸ್ತುವಾರಿ ಸಚಿವರು, ಪೌರಾಡಳಿತ ಸಚಿವರು ಹಾಗೂ ಸಂಸದರು ಆಗಮಿಸಿದಾಗ ಅವರ ಜತೆ ಬಂದ ನೂರಾರು ಬಿಜೆಪಿ ಕಾರ್ಯಕರ್ತರಿಗೆ ಸಮಾರಂಭದಲ್ಲಿ ಕೂರಲು ಆಸನಗಳು ಲಭ್ಯವಿಲ್ಲದ ಕಾರಣ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ೂಷಣೆ ಕೂಗಿದರಲ್ಲದೆ ಪ್ರಧಾನಿ ಮೋದಿ ಪರ ೂಷಣೆಗಳನ್ನು ಕೂಗಿ ಸಮಾರಂಭಕ್ಕೆ ಅಡ್ಡಿಪಡಿಸಿದರು. ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರೂ ಶಾಸಕರ ಪರವಾಗಿ ೂಷಣೆಗಳನ್ನು ಕೂಗಲು ಮುಂದಾದಾಗ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತು.
ಪೊಲೀಸರು ಎಷ್ಟೇ ಪ್ರಯತ್ನ ಮಾಡಿದರೂ ಪರಿಸ್ಥಿತಿ ಶಾಂತವಾಗದಿದ್ದಾಗ ವೇದಿಕೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಕುರ್ಚಿಗಳ ವ್ಯವಸ್ಥೆ ಮಾಡಿದ ನಂತರ ಪರಿಸ್ಥಿತಿ ಶಾಂತವಾಯಿತು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಸಚಿವರು ೇತ್ರಕ್ಕೆ ಬಂದಾಗ ಅಭಿವೃದ್ಧಿ ವಿಷಯಗಳ ಬಗ್ಗೆ ಅವರ ಗಮನ ಸೆಳೆಯಬೇಕು. ಅದು ಬಿಟ್ಟು ನಾನೇಷ್ಟು ನೀನೆಷ್ಟು ಎಂದು ಶಕ್ತಿ ತೋರಿಸುವ ವೇದಿಕೆ ಇದಲ್ಲ. ನನ್ನ ಅಜ್ಜನ ಕಾಲದಿಂದಲೂ ಬಂಗಾರಪೇಟೆ ಪಟ್ಟಣದಲ್ಲಿ ಮುಖ್ಯ ರಸ್ತೆಯೊಂದನ್ನು ಬಿಟ್ಟರೆ ಬೇರೆನೂ ಅಭಿವೃದ್ಧಿಯಾಗಿಲ್ಲ, ಅಭಿವೃದ್ಧಿ ಮಾಡುವ ವಿಷಯದಲ್ಲಿ ಶಕ್ತಿ ಪ್ರದರ್ಶನ ಮಾಡದೆ ಶಾಸಕರು ಅನಗತ್ಯ ವಿಷಯದಲ್ಲಿ ರಾಜಕೀಯ ಡ್ರಾಮಾ ಮಾಡುವರು ಎಂದು ಹೇಳಿದಾಗ, ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಮೇಲಿದ್ದ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಅನಿಲ್ ಕುಮಾರ್ ಮಧ್ಯೆ ಪ್ರವೇಶ ಮಾಡಿ ಸಂಸದರು ವಿನಾಕಾರಣ ರಾಜಕೀಯ ಭಾಷಣ ಮಾಡುವ ಮೂಲಕ ಕೆಣಕುತ್ತಿದ್ದಾರೆಂದು ಭಾಷಣಕ್ಕೆ ಅಡ್ಡಿಪಡಿಸಿದರು. ಸಂಸದರ ಹಾಗೂ ಅವರಿಗೆ ಬೆಂಬಲ ನೀಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಶಾಸಕರು ಏರುಧ್ವನಿಯಲ್ಲಿ ನಿಂದಿಸಿದ್ದು ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಭೆಗೆ ಕಾರಣವಾಯಿತು.
ಬಿಜೆಪಿ ಕಾರ್ಯಕರ್ತರಿಗೆ ಕುರ್ಚಿ ಸಿಗಲಿಲ್ಲವೆಂದು ಕಾರ್ಯಕರ್ತರು ಕೂಗಾಡಿ ಜೈ ಶ್ರೀರಾಮ್, ಜೈಮೋದಿ ಎಂದು ೂಷಣೆ ಕೂಗಿದಾಗ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಿಜೆಪಿ ಕಾರ್ಯಕರ್ತರನ್ನು ರೌಡಿಸಂ ಮಾಡುವಿರಾ, ನೀವು ರೌಡಿಗಳೇ ಎಂದಾಗ ಆಕ್ರೋಶಗೊಂಡ ಸಚಿವ ಮುನಿರತ್ನ ಅವರೆಲ್ಲ ಬಿಜೆಪಿ ಕಾರ್ಯಕರ್ತರು ರೌಡಿಗಳಲ್ಲ. ನಮ್ಮ ಕಾರ್ಯಕರ್ತರನ್ನು ರೌಡಿಗಳೆಂದು ಹೇಳಲು ನಿಮಗೆ ಎಷ್ಟು ಧೈರ್ಯ, ಯಾವ ಸಮಾರಂಭದಲ್ಲಿ ಹೇಗೆ ವರ್ತಿಸಬೇಕು ಎಂಬ ಸಾಮಾಜ್ಯ ಜ್ಞಾನ ನಿಮಗಿಲ್ಲವೇ, ಇದು ಸರ್ಕಾರಿ ಸಮಾರಂಭ, ಎಚ್ಚರಿಕೆಯಿಂದ ಮಾತನಾಡಿ ಎಂದು ಎಚ್ಚರಿಕೆ ನೀಡಿದರು.
ವೇದಿಕೆ ಮೇಲಿದ್ದ ಇಬ್ಬರು ಸಚಿವರ ಎದುರೇ ಕಾರ್ಯಕರ್ತರ ಕಿತ್ತಾಟ ನಡೆಯಿತು. ಇಬ್ಬರು ಸಚಿವರು ಎದ್ದು ಇಬ್ಬರನ್ನೂ ಸಮಾಧಾನ ಮಾಡಲು ಶತಪ್ರಯತ್ನ ಮಾಡಿದರೂ ಫಲ ನೀಡದ ಕಾರಣ ಬೇಸರಗೊಂಡು ಸಭೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ನಿರ್ಗಮಿಸಿದರು. ಸಚಿವರು ನಿರ್ಗಮಿಸುತ್ತಿದ್ದಂತೆ ಅವರನ್ನು ಬಿಜೆಪಿ ಕಾರ್ಯಕರ್ತರು ಹಿಂಬಾಲಿಸಿದರು. ವೇದಿಕೆ ಮೇಲೆ ಕೆಜಿಎಫ್ ಎಸ್ಪಿ ಹಾಗೂ ಡಿವೈಎಸ್ಪಿ ಇದ್ದರೂ ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡಿದರು.