ಜಿಲ್ಲೆ

ನಾರಾಯಣರಾವ್ ನಿಧನಕ್ಕೆ ಕಂಬನಿ

ಬೀದರ್: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನದ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ಶ್ರದ್ಧಾಂಜಲಿ ಸಭೆ ಜರುಗಿದವು. ವಿವಿಧ ಸಂಘ-ಸಂಸ್ಥೆಗಳಿಂದ ಜರುಗಿದ ಸಭೆಯಲ್ಲಿ ಅಗಲಿದ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಲಾಯಿತು. ಅವರ ಹೋರಾಟದ ಹಾದಿ, ಜನಪರ, ಬಡವರ ಪರ ಕಾಳಜಿ ಬಗ್ಗೆ ಗುಣಗಾನ ಮಾಡಲಾಯಿತು.

ನಗರದ ಬಸವ ಮಂಟಪದಲ್ಲಿ ಮಾತೆ ಸತ್ಯಾದೇವಿ, ಶಿವಶರಣಪ್ಪ ಪಾಟೀಲ್, ಮಲ್ಲಿಕಾರ್ಜುನ ಜೈಲರ್, ಮನ್ಮಥಯ್ಯ ಸ್ವಾಮಿ, ಸಂಗಮೇಶ ಅಳ್ಳೆ, ಶಾಂತಪ್ಪ ಮುಗಳಿ, ಶಿವಕುಮಾರ ಸ್ವಾಮಿ, ರಾಚಯ್ಯ ಸ್ವಾಮಿ ಇತರರಿದ್ದರು. ಶಾಸಕರು ಅನುಭವ ಮಂಟಪದ ನಿರ್ಮಾಣದ ಬಗ್ಗೆ ಹೊಂದಿದ್ದ ಆಸಕ್ತಿಯನ್ನು ಸ್ಮರಿಸಲಾಯಿತು.
ವಿವಿಧ ಒಕ್ಕೂಟ: ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಪ್ರಮುಖರಾದ ಬಾಬುರಾವ ಪಾಸ್ವಾನ್, ಅರುಣ ಪಟೇಲ್, ಶಾಲಿವಾನ ಬಡಿಗೇರ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಅಶೋಕ ಮಾಳಗೆ, ಬಕ್ಕಪ್ಪ ದಂಡಿನ್, ಓಂಪ್ರಕಾಶ ಭಾವಿಕಟ್ಟಿ, ಪ್ರದೀಪ ನಾಟೇಕರ್, ಅವಿನಾಶ ದೀನೆ, ಸುಬ್ಬಣ್ಣ ಕರಕನಳ್ಳಿ, ಅಮರ ಪೂಜಾರಿ, ಶಿವಕುಮಾರ ತುಂಗಾ, ಕಲ್ಯಾಣರಾವ ಗೋರನಳ್ಳಕರ್, ರಾಹುಲ್ ಡಾಂಗೆ, ಖಲಿಲ್ಮಿಯ್ಯಾ ಗುತ್ತೇದಾರ, ಸತ್ಯದೀಪ, ಅಂಬಾದಾಸ ಗಾಯಕವಾಡ, ನಾಗೇಶ ಜನವಾಡ, ಅಭಿ ಕಾಳೆ, ವಿನಯಕುಮಾರ ಭಾವಿಕಟ್ಟಿ ಇದ್ದರು.

ಗೊಂಡ ಸಮಾಜ: ನಗರದ ಬೊಮಗೊಂಡೇಶ್ವರ ವೃತ್ತದಲ್ಲಿ ಜಿಲ್ಲಾ ಗೊಂಡ ಕುರುಬ ಸಮಾಜದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖಂಡ ಬಜರಂಗ ಖಾಶೆಂಪುರ ಮಾತನಾಡಿದರು. ಪ್ರಮುಖರಾದ ಸಂತೋಷ ಜೋಳದಾಪಕೆ, ಬೊಮಗೊಂಡ ಚಿಟ್ಟಾವಾಡಿ, ಕಲ್ಲಪ್ಪ ಬೆನಕನಳ್ಳಿ, ಬಕ್ಕಪ್ಪ ನಾಗೂರೆ ಇದ್ದರು.
ಕಲಾವಿದರ ಒಕ್ಕೂಟ: ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ವಿಜಯಕುಮಾರ ಸೋನಾರೆ ಮಾತನಾಡಿದರು. ಪಾರ್ವತಿ ಸೋನಾರೆ, ಸುನೀಲ ಭಾವಿಕಟ್ಟಿ, ಎಂ.ಪಿ. ಮುದಾಳೆ, ಶ್ರೀಮಂತ ಸಪಾಟೆ, ಸುಧಾಕರರಾವ್ ಏಕಂಬೇಕರ್ ಇತರರಿದ್ದರು.

ಹಡಪದ ಸಮಾಜ: ನಗರದ ಸಿಎಂಸಿ ಬಡಾವಣೆಯ ಕುಂಬಾರವಾಡಾ ಕ್ರಾಸ್ ಹತ್ತಿರದ ಮಹಾತ್ಮ ಹಡಪದ ಅಪ್ಪಣ್ಣನವರ ವೃತ್ತ ಬಳಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಾಜದ ಹಿರಿಯ ಮುಖಂಡ ಪ್ರಭುರಾವ ತರನಳ್ಳಿ ಅವರು ನಾರಾಯಣರಾವ್ ಅವರ ಜೀವನ, ಸಾಧನೆ, ಹೋರಾಟದ ಹಾದಿ ಮೆಲಕು ಹಾಕಿದರು. ಶರಣಪ್ಪ ಚಂದನಹಳ್ಳಿ, ಸುಭಾಷ ಇತರರಿದ್ದರು.

ಕೊಳಾರ್: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನಪರ ವೇದಿಕೆಯಿಂದ ಕೊಳಾರ್ ಗ್ರಾಮದಲ್ಲಿ ನಡೆದ ಶ್ರದ್ಧಾಂಜಲಿಯಲ್ಲಿ ವೇದಿಕೆ ಅಧ್ಯಕ್ಷ ಅಂಬರೀಶ್ ವಡಗೈ, ಪ್ರಶಾಂತ, ಜೇಮ್ಸ್ ಮಾತನಾಡಿದರು. ಸಂತೋಷ, ರಾಜಕುಮಾರ, ಬಾಲಾಜಿ, ಪ್ರಭು, ಆನಂದ, ರಮೇಶ, ಪ್ರದೀಪ್, ಕನಕದಾಸ ಇದ್ದರು.

ಔರಾದ್: ಔರಾದ್ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಬಸವರಾಜ ದೇಶಮುಖ, ಚನ್ನಪ್ಪ ಉಪ್ಪೆ, ಫಯಾಜ್, ಸುಧಾಕರ ಕೊಳ್ಳುರ್, ಶಿವಾಜಿರಾವ ಬೋರಳ, ವಿಜಯಕುಮಾರ ನಾಗಶೆಟ್ಟಿ, ಪ್ರಭುರಾವ ಬಾಚೆಪಳ್ಳಿ, ಮೊಗಲಪ್ಪ ಸುಂಧಾಳ, ಮಾರುತಿ ರಾಠೋಡ್, ಸೂರ್ಯಕಾಂತ ಚಾರಿ ಇತರರಿದ್ದರು.

ಭಾಲ್ಕಿ ವರದಿ: ಜೈ ಭಾರತ ಮಾತಾ ಸೇವಾ ಸಮಿತಿ ತಾಲೂಕು ಘಟಕದಿಂದ ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕಾಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ, ಪ್ರಮುಖರಾದ ಸಂತೋಷ ಬಿಜಿ ಪಾಟೀಲ್, ಅನೀಲ ದಾಡಗೆ, ಸಂಗಮೇಶ ಗುಮ್ಮೆ, ಗೌತಮ ಸಿಂಧೆ, ಶಿವಾಜಿರಾವ ಸಗರ, ನಾಗೇಶ ಪಾಟೀಲ್ ಖಾನಾಪುರ, ಸಾಗರ, ಸಿದ್ಧಗೊಂಡ, ವೀರೇಶ ಸಿಂಧೆ ಇದ್ದರು.

ನಾರಾಯಣರಾವ್ ವ್ಯಕ್ತಿತ್ವ ಮಾದರಿ
ಬಸವಕಲ್ಯಾಣ: ಶಾಸಕ ನಾರಾಯಣರಾವ್ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಜನರಿಗೋಸ್ಕರ ಹಗಲಿರುಳು ದುಡಿದ, ಎಲ್ಲರನ್ನೂ ಸಮಾನವಾಗಿ ಕಂಡಿದ್ದರು. ವಿಧಾನಸಭೆಯಲ್ಲಿ ಅವರು ಮಾಡಿದ ಭಾಷಣ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಿಳಿಸಿದ್ದಾರೆ. ಸರಳ, ಸಜ್ಜನ ವ್ಯಕ್ತಿತ್ವದ ನಾರಾಯಣರಾವ್ ನಿಧನದಿಂದ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಜನರ ಹಿತ ಮತ್ತು ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಿದ್ದ ಅವರ ಕ್ರಿಯಾಶೀಲ ವ್ಯಕ್ತಿತ್ವ ಮಾದರಿಯಾಗಿದೆ ಎಂದು ಬಿಜೆಪಿಯ ಮುಖಂಡ ಸಂಜಯ್ ಪಟವಾರಿ ತಿಳಿಸಿದ್ದಾರೆ. ಶಾಸಕರು ಹುಟ್ಟು ಹೋರಾಟಗಾರರಾಗಿದ್ದರು. ಸಂಘರ್ಷದ ಮೂಲಕ ಸಾಧನೆ ಮಾಡಿದವರು. ಅವರ ನಿಧನವು ರಾಜ್ಯಕ್ಕೆ ಮತ್ತು ಸಮಾಜಕ್ಕೆ ತಂಬಲಾರದ ನಷ್ಟ ತಂದಿದೆ ಎಂದು ಬಿಜೆಪಿ ಮುಖಂಡ ಪ್ರದೀಪ ವಾತಡೆ ತಿಳಿಸಿದ್ದಾರೆ.

ಪಠ್ಯದಲ್ಲಿ ಸೇರಲಿ ಹೋರಾಟ
ಬೀದರ್: ಶಾಸಕ ನಾರಾಯಣರಾವ್ ಅವರ ಹೋರಾಟದ ಹಾದಿ ಪ್ರೇರಣಾದಾಯಕವಿದೆ. ಅದನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಮಹ್ಮದ್ ಆಸಿಫೊದ್ದೀನ್, ಜಿಲ್ಲಾಧ್ಯಕ್ಷ ಮಹ್ಮದ್ ನಿಜಾಮೊದ್ದೀನ್, ಮಹ್ಮದ್ ನಜಿಬೊದ್ದೀನ್, ಮಹ್ಮದ್ ಅಕ್ರಂ ಅಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಬಡವರು, ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಏಳ್ಗೆಗೆ ನಾಲ್ಕು ದಶಕ ನಿರಂತರ ಹೋರಾಡಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಹಾಸ್ಟಲ್ ಆರಂಭಿಸಲು ಕಾರಣಿಕರ್ತರಾದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು. ಹೇಳಿದ್ದಾರೆ. ಅವರ ಹೋರಾಟ ರೋಚಕವಿದೆ. ಇದು ಪಠ್ಯಕ್ಕೆ ಸೇರಿದರೆ ಮುಂದಿನ ಪೀಳಿಗೆಗೆ ಹೋರಾಟಕ್ಕೆ ಸ್ಪೂರ್ತಿಯಾಗಲಿದೆ ಎಂದು ತಿಳಿಸಿದರು.

ಶಾಸಕ ನಾರಾಯಣರಾವ್ ಅವರ ಜೀವನವೇ ಸಂಘರ್ಷ. ಬಾಲ್ಯದಿಂದಲೇ ಹೋರಾಟಕ್ಕೆ ಧುಮುಕಿದ್ದರು. ಬಡವರ ಬಗ್ಗೆ ಅವರಿಗಿದ್ದ ಕಾಳಜಿಯೇ ಹಗಲಿರುಳೆನ್ನದೆ ಹೋರಾಟಕ್ಕೆ ಅಣಿಗೊಳಿಸಿತ್ತು. ಜಿಲ್ಲೆಯಲ್ಲಿ ಕುರುಬ ಸಮಾಜ ಸಂಘಟನೆಗೆ ಬುನಾದಿ ಹಾಕಿದ ಅಗ್ರಗಣ್ಯರು. ಈ ಭಾಗದ ಶ್ರೇಷ್ಠ ಹಿಂದುಳಿದ ವರ್ಗಗಳ ನೇತಾರ ಎನಿಸಿಕೊಳ್ಳಲು ಅವರು ಮಾತ್ರ ಸಮರ್ಥರಿದ್ದರು. ಅವರ ನಿಧನದಿಂದ ಸಮಾಜ ಒಬ್ಬ ಪ್ರಗತಿಪರ ಚಿಂತಕನಿಗೆ ಕಳೆದುಕೊಂಡಿದೆ.| ಶಿವಶರಣಪ್ಪ ವಾಲಿ ಹಿರಿಯ ಪತ್ರಕರ್ತ