ಜಿಲ್ಲೆ

ನಾರಾಯಣಪುರ-ವಿಜಯಪುರ ಬಸ್ ಆರಂಭ

ಹುಣಸಗಿ: ನೂತನವಾಗಿ ಆರಂಭಿಸಲಾದ ನಾರಾಯಣಪುರ, ಗೆದ್ದಲಮರಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುವ ಬಸ್ ತಾಲೂಕಿನ ಕೊನೇ ಅಂಚಿನ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಗೌರವಾಧ್ಯಕ್ಷ ಶಿವರಾಜ ಹೊಕ್ರಾಣಿ ಹೇಳಿದರು.

ಈ ವೇಳೆ ಗೆದ್ದಲಮರಿ ಗ್ರಾಮದಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಈ ಕುರಿತು ಅನೇಕ ಬಾರಿ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಈ ಮನವಿಗೆ ಸಾರಿಗೆ ಅಧಿಕಾರಿಗಳಾದ ಸುನೀಲ್ ಚಂದರಗಿ, ಸಂಚಾರ ವ್ಯವಸ್ಥಾಪಕ ವಿ.ರೆಡ್ಡಿ ಅವರು ತಕ್ಷಣ ಸ್ಪಂದಿಸಿ ನೂತನ ಮಾರ್ಗದ ಬಸ್‌ಗೆ ಚಾಲನೆ ನೀಡಿದ್ದಾರೆ. ಎಂದರು.

ಈ ಬಸ್ ಬೆಳಗ್ಗೆ ೮-೧೫ಕ್ಕೆ ನಾರಾಯಣಪುರದಿಂದ ಹೊರಟು, ಗೆದ್ದಲಮರಿ, ಹುಣಸಗಿ, ತಾಳಿಕೋಟೆ ಮೂಲಕ ವಿಜಯಪುರಗೆ ಮಧ್ಯಾಹ್ನ ೧೨-೧೫ಕ್ಕೆ ತಲುಪಲಿದೆ. ವಿಜಯಪುರದಿಂದ ೧೨-೪೫ಕ್ಕೆ ಹೊರಟು ಅದೆ ಮಾರ್ಗದಲ್ಲಿ ಗೆದ್ದಲಮರಿ ಮೂಲಕ ಸಂಜೆ ೪.೩೦ಕ್ಕೆ ನಾರಾಯಣಪುರ ತಲುಪಲಿದೆ. ಈ ಮಾರ್ಗದ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ಬಸವಂತರಾಯ ಸಾಹುಕಾರ, ಸೋಮಣ್ಣ ಬಿರಾದಾರ, ರಾಮಣ್ಣ ಬಿರಾದಾರ, ನಿಂಗಣ್ಣ ಬಿರಾದಾರ, ದೇವಪ್ಪ ಬಳಿ, ಗುರಣ್ಣ ಬಳಿ, ರುದ್ರಪ್ಪ ಲಿಂಗಸೂಗೂರು, ತಿರುಪತಿ ದಳಪತಿ, ಬಸವಂತ್ರಾವ ದೇಶಪಾಂಡೆ, ಶಿವರಾಜ ಅಂಗಡಿ ಇತರರಿದ್ದರು.