ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಹನುಮಂತಪ್ಪ ಅಂಡಗಿ, ಮುಖ್ಯ ಶಿಕ್ಷಕ ದೇವಪ್ಪ ಬಚಕ್ಕನವರ, ಶಿಕ್ಷಕರಾದ ಬಸವರಾಜ, ಕಸ್ತೂರಿ, ಪವಿತ್ರ, ಚಾರುಲತಾ, ರೇಣುಕಾ, ಭಾಗಿರಥಿ, ಶಿಲ್ಪಾ, ಮರಿಸ್ವಾಮಿ, ಕರಿಯಮ್ಮ, ದೇವರಾಜ ಇದ್ದರು. 
ಜಿಲ್ಲೆ

ನಾರಾಯಣ ಗುರು ಆದರ್ಶ ಅಳವಡಿಸಿಕೊಳ್ಳಿ

Gangavati - Desk - Veeresh S Ullagaddi

ಅಳವಂಡಿ: ನಾರಾಯಣ ಗುರು ಸಮುದಾಯಕ್ಕೆ ಮಾತ್ರ ಸೀಮಿತರಾಗದೆ ಲೋಕ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಹೇಳಿದರು.


ಸಮೀಪದ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.


ಬಾಲ್ಯ ವಿವಾಹ, ಮೂಡನಂಬಿಕೆ, ಅಸ್ಪಶ್ಯತೆ, ಜೀತ ಪದ್ದತಿ ವಿರುದ್ದ ಹೋರಾಡಿ ಬದುಕಿನ ಪಾಠ ಮಾಡಿದ ನಾರಾಯಣ ಗುರು ಕಾರ್ಯ ಶ್ಲಾಘನೀಯ. ನುಲಿಯ ಚಂದಯ್ಯ ಬಸವಾದಿ ಶರಣರಲ್ಲಿಯೇ ವಿಶಿಷ್ಟ ಸ್ವಭಾವ ಹಾಗೂ ಸ್ವಚ್ಛ ಮನದ ಸ್ವತಂತ್ರ ವಿಚಾರ ವಾದಿಯಾಗಿದ್ದರು. ಕಾಯಕ ಸಿದ್ದಾಂತಕ್ಕೆ ಮಹತ್ವ ನೀಡಿ ಅದರ ಮೌಲ್ಯ ಹೆಚ್ಚಿಸಿದ್ದಾರೆ ಎಂದರು.


ಮುಖ್ಯ ಶಿಕ್ಷಕ ದೇವಪ್ಪ ಬಚಕ್ಕನವರ, ಶಿಕ್ಷಕರಾದ ಬಸವರಾಜ ತೊಂಡಿಹಾಳ, ಕಸ್ತೂರಿ ಕಡೇಮನಿ, ಪವಿತ್ರ ವೈದ್ಯ, ಚಾರುಲತಾ, ರೇಣುಕಾ ಮಣ್ಣೂರ, ಭಾಗಿರಥಿ ಯಲ್ಲನಗೌಡರ, ಶಿಲ್ಪಾ ಚಿತ್ರಗಾರ, ಮರಿಸ್ವಾಮಿ ಪೂಜಾರ, ಕರಿಯಮ್ಮ, ದೇವರಾಜ ಕಿನ್ನಾಳ ಇದ್ದರು.