ಜಿಲ್ಲೆ

ನಾರಾ ಪ್ರತಾಪ್‌ರೆಡ್ಡಿ ಗೆ ಮತ ಚಲಾಯಿಸಬೇಡಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಈಶಾನ್ಯ ಪದವಿಧರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ನಾರಾ ಪ್ರತಾಪ್‌ರೆಡ್ಡಿ ಗೆ ಯಾರು ಮತ ಚಲಾಯಿಸಬೇಡಿ ಎಂದು ಜಿಲ್ಲಾಧ್ಯಕ್ಷ ಕರಿಯಪ್ಪ ಗುಡಿಮನಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಜನಶಕ್ತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಮಾದಿಗ ರಕ್ಷಣೆ ವೇದಿಕೆ, ಬಂಡಿಹಟ್ಟಿ ಮತ್ತು ದಾನಪ್ಪ ಬೀದಿ ಭೂಮಿ ವಂಚಿತ ರೈತರ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಹೊರವಲಯದ ಬಂಡಿಹಟ್ಟಿ ಪ್ರದೇಶದಲ್ಲಿ ನಾರಾ ಪ್ರತಾಪ್‌ರೆಡ್ಡಿ ಬುಡಾ ಅಧ್ಯಕ್ಷರಾದ ವೇಳೆ ನಕಲಿ ದಾಖಲೆ ಸೃಷ್ಠಿಸಿ 44 ರೈತರ 135 ಎಕರೆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದರು. ಈ ತನಿಖೆಯು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಬಹುತೇಕ ತೀರ್ಪು ರೈತರ ಪರವಾಗಿ ಬರಲಿದೆ ಎಂದರು. ಈಗಾಗಲೇ ಭೂಮಿಯಲ್ಲಿನ ನಾಲ್ಕು ಎಕರೆಯನ್ನು ಸರ್ಕಾರಿ ಅಧಿಕಾರಿಗಳ ಕುಮ್ಮುಕ್ಕಿನಿಂದ ನಾಲ್ಕು ಎಕರೆ ಜಮೀನನ್ನು ಇಸ್ಕಾನ್ ದೇವಾಲಯಕ್ಕೆ ನೊಂದಾಯಿಸಿದ್ದಾರೆ. ಜಿಲ್ಲಾಡಳಿತ ರಾಜಕೀಯ ಹಾಗೂ ಹಣದ ಪ್ರಭಾವಕ್ಕೆ ಒಳಗಾಗಿ ಅವರ ಮೇಲೆ ಯಾವುದೇ ಕ್ರಮವಹಿಸಿಲ್ಲ. ಭೂ ಕಬಳಿಕೆ ಆರೋಪದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಗಿ ರೈತರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇದಲ್ಲದೇ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್‌ರೆಡ್ಡಿ ಈ 44 ರೈತರಿಗೆ ಹಲವು ವರ್ಷಗಳಿಂದ ವಿವಿಧ ರೀತಿಯ ನೋವು ಹಾಗೂ ಕಿರುಕುಳ ನೀಡಿದ್ದಾರೆ. ನಾರಾ ಪ್ರತಾಪ್‌ರೆಡ್ಡಿ ಮೇಲೆ ಈಗಾಗಲೇ ಹಲವು ಭೂ ಕಬಳಿಕೆ ಆರೋಪದ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಆದ್ದರಿಂದ, ಇಂತಹ ಭ್ರಷ್ಟ ವ್ಯಕ್ತಿಗೆ ಮತ ಚಲಾಯಿಸಬೇಡಿ. ಅಧಿಕಾರದಲ್ಲಿ ಇಲ್ಲದ ವೇಳೆಯೆ ರೈತರ ಮೇಲೆ ದರ್ಪ ತೋರುತ್ತಿದ್ದು, ವಿಧಾನಪರಿಷತ್ ಸದಸ್ಯರಾದರೆ ಇನ್ನೇಷ್ಟು ದಬ್ಬಾಳಿಕೆ ಮಾಡಲಿದ್ದಾರೆ ಎಂಬುದು ನಿಮ್ಮ ವಿವೇಕಕ್ಕೆ ಬಿಟ್ಟಿದ್ದು. ಇನ್ನು ರಾಷ್ಟ್ರಿಯ ಪಕ್ಷದಿಂದ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ, ಅದರಲ್ಲಿ ನಿಮಗೆ ಯಾರು ಸೂಕ್ತ ಎನ್ನುತ್ತಾರೆ ಅವರಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಮೋಹನ್, ಕೆ.ನಾಗರಾಜ, ಹರಿ, ಕುಮಾರ್, ಗೋಪಿ, ಶಂಕ್ರಯ್ಯ, ಶಾಂತಯ್ಯ, ರಾಮು, ನೆಟಕಲ್ಲಪ್ಪ ಇದ್ದರು.