ಜಿಲ್ಲೆ

ನಾಯಿಗಳ ದಾಳಿಗೆ ಏಳು ಕುರಿಗಳು ಬಲಿ

ಹನೂರು: ತಾಲೂಕಿನ ಜಿ.ಕೆ ಹೊಸೂರು ಗ್ರಾಮದಲ್ಲಿ ಬುಧವಾರ ನಾಯಿಗಳ ದಾಳಿಗೆ 7 ಕುರಿಗಳು ಬಲಿಯಾಗಿವೆ.

ಗ್ರಾಮದ ಸಿದ್ದರಾಜು ಎಂಬವರು ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ನಾಯಿಗಳು ದಾಳಿ ನಡೆಸಿವೆ. ಕುರಿಗಳ ಚೀರಾಟದ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಾಗಲೇ 7 ಕುರಿಗಳು ಮೃತಪಟ್ಟಿದ್ದು, ಎರಡು ಕುರಿಗಳಿಗೆ ಗಾಯವಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ಗಾಯಗೊಂಡಿದ್ದ 2 ಕುರಿಗಳಿಗೆ ಚಿಕಿತ್ಸೆ ನೀಡಿದರಲ್ಲದೆ, ಮೃತಪಟ್ಟ ಕುರಿಗಳಿಗೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವುದಾಗಿ ಮಾಲೀಕ ಸಿದ್ದರಾಜುಗೆ ಭರವಸೆ ನೀಡಿದರು.