ಜಿಲ್ಲೆ

ನಾಯಿ ಹಿಂಡಿನ ದಾಳಿಯಿಂದ ಮೇಕೆ, ಕುರಿಗಳ ಸಾವು

ಮೈಸೂರು: ನಗರದಲ್ಲಿ ನಾಯಿಗಳ ಹಿಂಡು ದಾಳಿ ನಡೆಸಿ ಮೂರು ಕುರಿ, ಒಂದು ಮೇಕೆಯನ್ನು ಕಚ್ಚಿ ಸಾಯಿಸಿವೆ.
ವಾರ್ಡ್ ಸಂಖ್ಯೆ 51ರ ಅಗ್ರಹಾರ ವೀಣೆ ಶೇಷಣ್ಣ ರಸ್ತೆ ಒಂದನೇ ಕ್ರಾಸ್‌ನಲ್ಲಿ ಹತ್ತಕ್ಕೂ ಹೆಚ್ಚು ನಾಯಿಗಳ ಹಿಂಡು ಮುದಾಸೀರ್ ಅವರಿಗೆ ಸೇರಿದ ಕುರಿ, ಮೇಕೆಗಳ ಮೇಲೆ ಸೋಮವಾರ ದಾಳಿ ನಡೆಸಿವೆ.
ಕಾಂಪೌಂಡ್ ನಿರ್ಮಿಸಿ ಗೇಟ್ ಹಾಕಿದ್ದ ಖಾಲಿ ನಿವೇಶನದಲ್ಲಿ ಕುರಿ, ಮೇಕೆಗಳನ್ನು ಮುದಾಸೀರ್ ಸಾಕುತ್ತಿದ್ದರು. ಈ ವೇಳೆ ಒಳಗೆ ನುಗ್ಗಿದ ನಾಯಿಗಳ ಹಿಂಡು ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿವೆ. ಸುತ್ತಲೂ ಕಾಂಪೌಂಡ್ ಇದ್ದುದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕುರಿ, ಮೇಕೆಗಳು ಸಾಯಿಗಳ ಬಾಯಿಗೆ ತುತ್ತಾಗಿವೆ. ಸತ್ತ ನಾಲ್ಕು ಈ ಪ್ರಾಣಿಗಳು ಹೆಣ್ಣಾಗಿದ್ದು, ಈ ಪೈಕಿ ಎರಡು ಗರ್ಭಾವಸ್ಥೆಯಲ್ಲಿದ್ದವು. ಇದರಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.
ಇದಲ್ಲದೆ ಈ ಹಿಂದೆಯೂ ಬಡಾವಣೆಯಲ್ಲಿ ಮನೆಗಳಿಗೆ ನುಗ್ಗಿದ ನಾಯಿಗಳು ಸಾಕು ಚೆಕ್ಕುಗಳನ್ನು ಸಹ ತಿಂದಿರುವ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್, ಆಟೋಗಳ ಸೀಟ್ ಕವರ್ಗಳನ್ನು ಹರಿದುಹಾಕುತ್ತಿರಯವ ಉದಾಹರಣೆಗಳು ಇವೆ ಎಂದು ನಿವಾಸಿಗಳು ದೂರಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಅವರು ಮುದಾಸೀರ್ ಅವರಿಗೆ ಸಾಂತ್ವಾನ ಹೇಳಿದರಲ್ಲದೇ, ನಗರಪಾಲಿಕೆಯಿಂದ ಸೂಕ್ತ ಪರಿಹಾರ ಕೊಡಿಸುವ ಕುರಿತು ಭರವಸೆ ನೀಡಿದರು.