ಚಾಮರಾಜನಗರ: ನಾಯಿ ಕಚ್ಚಿದ್ದಕ್ಕೆ ಅದನ್ನು ಸಾಕಿದ್ದ ಮಾಲೀಕ ಚಾಕು ಇರಿತಕ್ಕೆ ಒಳಗಾಗಿದ್ದಾನೆ. ತಾಲೂಕಿನ ಬಂಡಿಗೆರೆ ಗ್ರಾಮದ ಬಸವರಾಜುಗೆ (40) ಇದೇ ಗ್ರಾಮದ ಕುಮಾರ್ ಚಾಕು ಹಾಕಿದ್ದಾನೆ.
ಗ್ರಾಮದಲ್ಲಿ ಕುಮಾರ್ ತಂದೆಗೆ ಬಸವರಾಜು ಸಾಕಿದ್ದ ನಾಯಿ ಕಚ್ಚಿತ್ತು. ಈ ವಿಚಾರ ಗಲಾಟೆಗೆ ತಿರುಗಿ ಗ್ರಾಮದಲ್ಲಿ ನ್ಯಾಯ ಪಂಚಾಯಿತಿಯೂ ಆಗಿತ್ತು. ಆದರೆ ಗುರುವಾರ ನಗರಕ್ಕೆ ಬಂದಿದ್ದ ಬಸವರಾಜುಗೆ ಕುಮಾರ್ ಚಾಕು ಹಾಕಿದ್ದಾನೆ. ಈ ವಿಷಯ ತಿಳಿದ ಪಟ್ಟಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಗಾಯಾಳು ಬಸವರಾಜುನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಕುಮಾರ್ ಪರಾರಿಯಾಗಿದ್ದಾನೆ. ಪ್ರಕರಣದ ಸಂಬಂಧ ದೂರು ದಾಖಲಿಸುವ ಪ್ರಕ್ರಿಯೆ ನಡೆದಿದೆ.