ಆಲ್ದೂರು ಪೂರ್ಣಪ್ರಜ್ಞಾ ಶಾಲೆಯಲ್ಲಿ ಆಯೋಜಿಸಿದ್ದ ಅಂತರ್ ಪ್ರೌಢಶಾಲೆಗಳ ಬಾಲಕರ ಕ್ರೆಡಾಕೂಟವನ್ನು ಮಂಗಳೂರು ವಿವಿ ಕಿಶೋರ್‌ಕುಮಾರ್ ಉದ್ಘಾಟಿಸಿದರು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಸುಧಾಕರ್, ಬಿ.ಬಿ.ರೇಣುಕಾರ್ಯ ಇದ್ದರು. 
ಜಿಲ್ಲೆ

ನಾಯಕತ್ವದ ಗುಣ ಬೆಳೆಸಿಕೊಳ್ಳಿ

ಆಲ್ದೂರು: ಪೂರ್ಣ ಪ್ರಜ್ಞಾ ಶಾಲೆ ಮಕ್ಕಳೆಲ್ಲರೂ ಒಂದೆಡೆ ಮುಖಾಮುಖಿಯಾಗಬೇಕು. ಸೋಲು-ಗೆಲುವುಗಳೆರಡೂ ಆಟದ ಎರಡು ಮುಖಗಳು. ಅವುಗಳನ್ನು ಸಮಾನವಾಗಿ ಸ್ವೀಕರಿಸಿ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ಪೂರ್ಣ ಪ್ರಜ್ಞಾಶಾಲೆಯಲ್ಲಿ ಆಯೋಜಿಸಿದ್ದ ಪೂರ್ಣ ಪ್ರಜ್ಞಾ ಅಂತರ್ ಶಾಲೆಗಳ ಬಾಲಕರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೆಡಾಕೂಟಗಳು ದೈಹಿಕ ಸಾಮರ್ಥ್ಯದ ಜತೆಗೆ ಪರಸ್ಪರ ಹೊಂದಾಣಿಕೆ ಮನೋಭಾವ ಬೆಳೆಸುತ್ತವೆ. ಸ್ಪರ್ಧೆ ಆರೋಗ್ಯಕರವಾಗಿರಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಎಲ್ಲ ಸಂದರ್ಭಗಳಲ್ಲಿ ಸಮಾನವಾಗಿ ಸ್ವೀಕರಿಸಬೇಕು ಎಂದರು.

ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೆಶಕ ಕಿಶೋರ್‌ಕುಮಾರ್ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಶಾಲಾಮಟ್ಟದಲ್ಲಿ ಕ್ರೆಡಾಕೂಟಗಳನ್ನು ಹಮ್ಮಿಕೊಳ್ಳುವುದರಿಂದ ಕ್ರೀಡಾಪಟುಗಳು ಮುಂದೆ ಉನ್ನತ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದರು.

ಶಾಲೆ ಜಂಟಿ ಕಾರ್ಯದರ್ಶಿ ಸುಧಾಕರ್, ಕಾರ್ಯದರ್ಶಿ ಬಿ.ಬಿ.ರೇಣುಕಾರ್ಯ, ಪ್ರಾಚಾರ್ಯ ವೆಂಕಟೇಶ್, ಶಿಕ್ಷಕರಾದ ಸಿಂಧು ಮನು, ಶಶಿಕಲಾ, ಪಂಚಮಿ ಇದ್ದರು.