ಬಾಗಲಕೋಟೆ: ಪಠ್ಯದ ಜೊತೆಗೆ ಪಠ್ಯತರ ಚುಟುವಟಿಕೆಗಳಲ್ಲಿ ಭಾಗವಹಿಸಿದಲ್ಲಿ ಸ್ಪರ್ಧಾತ್ಮಕ ಮನೋಭಾವನೆ, ಕೌಶಲ, ನಾಯಕತ್ವಗುಣ ಬೆಳೆಯುತ್ತದೆ ಎಂದು ಹುನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಎನ್.ವಿ.ಅಸ್ಕಿ ಹೇಳಿದರು.
ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೨೦೨೩ -೨೪ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ, ಎನ್.ಎಸ್.ಎಸ್, ಸ್ಕೌಟ್ಸ್ ಗೈಡ್ಸ್, ಯುವ ರೆಡ್ ಕ್ರಾಸ್, ಪ್ಲೇಸ್ಮೆಂಟ್ ಸೆಲï ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಹಾಗೂ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾನಾಡಿದರು.
ಜೀವನದಲ್ಲಿ ಸಾಧನೆ ಮಾಡಬೇಕು ಅಂದುಕೊಳ್ಳುವುದು ಸಾಮಾನ್ಯ. ಅದರ ಜೊತೆಗೆ ಶ್ರಮ, ಪರಿಶ್ರಮ, ಮಾರ್ಗದರ್ಶನ ಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಮುನ್ನಡೆಯಬೇಕು ಎಂದರು.
ಕೆಪಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ವಿಜಯಲಕ್ಷ್ಮೀ ಪೆಟ್ಲೋರ್ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಉತ್ತಮ ಸೌಲಭ್ಯ ಹೊಂದಿದೆ. ಅದರ ಸದ್ಭಳಕೆ ಮಾಡಿಕೊಳ್ಳವುದು ವಿದ್ಯಾರ್ಥಿಗಳ ಮೇಲೆ ಇದೆ ಎಂದು ತಿಳಿಸಿದರು.
ಉಪ ಪ್ರಾಚಾರ್ಯ ರಾಜಶೇಖರ ಹಿರೇಮಠ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ರವಿ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಸುರೇಶ ಪಟ್ಟೇದ, ಸವಿತಾ ಹಲಸಿಗಿ ಇದ್ದರು. ಕಸ್ತೂರಿ ವಾಲಿ ತಂಡದವರು ಪ್ರಾರ್ಥಿಸಿದರು. ಮಂಜುನಾಥ ತೊಳಮಟ್ಟಿ ಸ್ವಾಗತಿಸಿದರು. ಸಂಜಯ ಕುಂಬಾರ ವಂದಿಸಿದರು. ಲಕ್ಷ್ಮಣ ಚಲವಾದಿ ನಿರೂಪಿಸಿದರು.