ಜಿಲ್ಲೆ

ನಾಮಧಾರಿಗೌಡ ಸಮಾಜ ಕಾಂಗ್ರೆಸ್ ಬೆಂಬಲಿಸಿ

ಸರಗೂರು: ಹಿಂದಿನ ಎರಡು ಚುನಾವಣೆಗಳಲ್ಲಿ ಕ್ರಮವಾಗಿ ನನ್ನ ತಂದೆ ಮತ್ತು ನನಗೆ ನಾಮಧಾರಿಗೌಡ ಸಮಾಜ ಹೆಚ್ಚಿನ ಬೆಂಬಲ ನೀಡಿದೆ. ಅಂತೆಯೆ, ಈ ಬಾರಿಯೂ ಬೆಂಬಲ ನೀಡಿ ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಮನವಿ ಮಾಡಿದರು.

ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಮಂಗಳವಾರ ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ.ಸುಂದರದಾಸ್ ನೇತೃತ್ವದಲ್ಲಿ ಸರಗೂರು ಮತ್ತು ಎಚ್.ಡಿ.ಕೋಟೆ ತಾಲೂಕು ನಾಮಧಾರಿಗೌಡ ಸಮುದಾಯದ ಕಾಂಗ್ರೆಸ್ ಬೆಂಬಲಿಗರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, 5 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳು, ಸಮುದಾಯಗಳ ನಡುವೆ ಘರ್ಷಣೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ್ದೇನೆ ಎಂದರು.
ನಾನು ಶಾಸಕನಾಗಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರಿಂದ ಶೇ.100ರಷ್ಟು ಅನುದಾನ ತಂದು ಅಭಿವೃದ್ಧಿ ಮಾಡಲಾಗಿಲ್ಲ. ಸಾಕಷ್ಟು ಶ್ರಮಿಸಿ ತಾಲೂಕಿನಲ್ಲಿ ಶೇ.90ರಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುವುದರಿಂದ ಶೇ. 100ರಷ್ಟು ಅಭಿವೃದ್ಧಿ ಮಾಡಲು ಸಹಾಯವಾಗುತ್ತದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ತಾಲೂಕಿಗೆ ಯಾವುದೇ ಕಪ್ಪುಚುಕ್ಕೆ ಬಾರದಂತೆ ಆಡಳಿತ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಧ್ರುವನಾರಾಯಣ ಅವರ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ರಸ್ತೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಮಾಡಿತ್ತು. ಆದ್ದರಿಂದ ಈ ಬಾರಿಯೂ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಬೆಂಬಲಿಸಿ ಎಂದರು.

ಎಚ್.ಡಿ.ಕೋಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಚಾಮರಾಜು ಕುಟುಂಬದಿಂದ ಪ್ರಚಾರಕ್ಕೆ ಅನಿಲ್ ಚಿಕ್ಕಮಾದು ಅವರಿಗೆ 50,000 ರೂ. ನೀಡಲಾಯಿತು.
ತಾಲೂಕು ನಾಮಧಾರಿಗೌಡ ಸಮಾಜದ ಅಧ್ಯಕ್ಷ ಎಂ.ಎನ್.ಭೀಮರಾಜು, ಜಿಪಂ ಮಾಜಿ ಸದಸ್ಯ ಪಿ.ರವಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಚಾಮರಾಜು, ಆಶೋಕ್, ಮಾತನಾಡಿದರು.

ವಿಜೇಂದ್ರ, ಬಿ.ಸಿ.ಬಸಪ್ಪ, ಚಕ್ಕೂರು ಬಸವರಾಜು, ಗುಣಪಾಲ್, ಜಿ.ಕೃಷ್ಣ, ಕಲ್ಲಹಳ್ಳ ಅಭಿಕುಮಾರ್, ಜಿನ್ನಪ್ಪ, ದಾಸಪ್ಪ, ಅಶೋಕ, ಬಿ.ಸಿ.ಚಿನ್ನಪ್ಪ, ದೇವದಾಸ್, ನವೀನ್ ದಾಸ್, ಅಜಿತ್, ಸುಬ್ರಹ್ಮಣ್ಯ, ಚಿನ್ನಸ್ವಾಮಪ್ಪ, ಕೃಷ್ಣ ,ಗುಣಪಾಲ್, ಎಲ್ ಐ ಸಿ ಚಂದ್ರ, ನಾಗೇಂದ್ರ,ಮುಂತಾದವರು ಹಾಜರಿದ್ದರು.