ಜಿಲ್ಲೆ

ನಾಪೋಕ್ಲುನಲ್ಲಿ ಸಂಭ್ರಮದ ಈದ್ ಆಚರಣೆ

ನಾಪೋಕ್ಲು: ಇಲ್ಲಿಯ ಪಟ್ಟಣದ ಮೋಯುದ್ದಿನ್ ಜುಮ ಮಸೀದಿ ಸೇರಿದಂತೆ ಸುತ್ತಮುತ್ತಲಿನ ಚೆರಿಯಪರಂಬು, ಹಳೆ ತಾಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕೊಟ್ಟಮುಡಿ, ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಸಡಗರ ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಿದ್ದರು.

ಇಲ್ಲಿಯ ಮೋಯುದ್ದಿನ್ ಜುಮ ಮಸೀದಿಯ ಕಾರ್ಯಕ್ರಮದಲ್ಲಿ ಖತೀಬ್ ಉಬೈದ್ ಸಖಾಫಿ ಅವರು ಈದ್ ಸಂದೇಶ ನೀಡಿ ಶಾಂತಿ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ಪ್ರಾರ್ಥನೆ ಬಳಿಕ ಎಲ್ಲರು ಪರಸ್ಪರ ಶುಭಾಶಯ ಹಂಚಿಕೊಂಡ ನಂತರ ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್, ಉಪ ಅಧ್ಯಕ್ಷ ಪಿ.ಎಂ. ಬದ್ರುದ್ದೀನ್, ಪಿ.ಎಂ. ಅರಫತ್, ಕಾರ್ಯದರ್ಶಿ ಪಿ.ಎಂ. ಯೂನಸ್, ಖಜಾಂಚಿ ಶಾಹಿದ್ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿದರು.