ಎಸ್.ಆರ್. ಪಾಟೀಲ  
ಜಿಲ್ಲೆ

ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ

ಬಾಗಲಕೋಟೆ: ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಸ್ಪಷ್ಟನೆ ಪಡಿಸಿದ್ದಾರೆ.

ಬೀಳಗಿ ತಾಲೂಕಿ ನ ಬಾಡಗಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಲೋಕಸಭಾ ಚುನಾವಣೆ ಅಪೇಕ್ಷಿತ ಅಭ್ಯರ್ಥಿ ಅಲ್ಲ. ಆದರೆ ಪಕ್ಷ ಎನೇ ಜವಾ ಬ್ದಾರಿ ನೀಡಿದರೆ ಕಾ ರ್ಯನಿ ರ್ವಹಿಸುತ್ತೇನೆ. ನಾಲ್ಕು ದಶಕ ಗಳ ಕಾಲ ರಾಜಕೀಯ ತೃಪ್ತಿ ತಂದಿದೆ. ಜಿಲ್ಲಾ ಪಂಚಾ ಯತ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ, ವಿ ರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದು, ಸಾಮಾಜಿಕ ಜೀವನದಲ್ಲಿ ಕೆಲಸ ಮಾಡಿರುವುದು ತೃಪ್ತಿ ತಂದಿದೆ.

ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಯಾವಾಗಲೂ ಆತ್ಮವಂಚನೆ ಮಾಡಿಕೊಂಡಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಕೆಲಸ ಆಗಬೇಕಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆ ಅಭಿವೃದ್ಧಿಯ ಕೆಲಸ ಕಾರ್ಯಗಳು ಆಗಬೇಕಾಗಿದೆ ಎಂದರು.