ಜಿಲ್ಲೆ

ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ

ಸಿರಿಗೇರಿ: ಗ್ರಾಮದಲ್ಲಿ ವಿವಿಧ ಸಮಸ್ಯೆಗಳ ಮಾಹಿತಿಯಿದ್ದು, ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿ ಸಿರಗುಪ್ಪ ಶಾಸಕ ಬಿ.ಎಂ.ನಾಗರಾಜ ಹೇಳಿದರು.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ಮತ್ತು ವೈದ್ಯರು-ಸಿಬ್ಬಂದಿ ವಸತಿಗೃಹ ಹಾಗೂ ಶವಾಗಾರದ ಕೊಠಡಿ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಕೆಕೆಆರ್‌ಡಿಬಿಯ 75 ಲಕ್ಷ ರೂ. ವೆಚ್ಚದಲ್ಲಿ ವೈದ್ಯರು, ಶುಶ್ರೂಷಕಿಯರ ವಸತಿಗೃಹ ಮತ್ತು ಶವಾಗಾರ ಕೊಠಡಿ ನಿರ್ಮಿಸಲಾಗಿದೆ. ಆರು ಹಾಸಿಗೆ ಇರುವ ಸಿರಿಗೇರಿ ಆಸ್ಪತ್ರೆಯನ್ನು 10 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಲಾಗಿದೆ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಇದಕ್ಕಾಗಿ ಲಾಬಿ ಕೂಡ ಮಾಡುತ್ತಿಲ್ಲ ಎಂದರು.

ಡಾ.ಡಿ.ಬಸವರಾಜ್, ಪ್ರಮುಖರಾದ ವಿ.ರೇಣುಕಪ್ಪ, ಗರ್ಜಿಲಿಂಗಪ್ಪ, ಕೆ.ರಾಘವೇಂದ್ರ, ಜಲಾಲಿ ಪೀರ, ಸಿರಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಉಪಾಧ್ಯಕ್ಷ ಎಸ್.ಎಂ ನಾಗರಾಜಸ್ವಾಮಿ, ವೈದ್ಯಾಧಿಕಾರಿಗಳಾದ ಎಸ್.ತಿಪ್ಪೇಸ್ವಾಮಿ ರೆಡ್ಡಿ, ಪೂಜಾರ್ ನಾಗರಾಜ್, ಎಇಇ ಎಚ್. ಚನ್ನನಗೌಡ, ಜೆಇ ಯು.ದೇವೇಂದ್ರಪ್ಪ, ನಗರಸಭೆ ಸದಸ್ಯ ಗಣೇಶ್, ಟಿ.ಸಿ ಮೋಹನ್ ಇತರರಿದ್ದರು.