ಚಿಟಗುಪ್ಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ತಾಪಂ ಇಒ ಲಕ್ಷ್ಮೀ ಬಿರಾದಾರ ಉದ್ಘಾಟಿಸಿದರು. ಪ್ರೊ. ಶಾಂತಕುಮಾರ ಪಾಟೀಲ್, ಡಾ.ಜಯಕುಮಾರ, ಮಹಾರುದ್ರಪ್ಪ ಅಣದೂರ, ರಾಜಪ್ಪ ಜಮಾದಾರ, ಪ್ರೇಮಿಳಾ ರೆಡ್ಡಿ, ಅಸ್ಲಾಂಮಿಯ್ಯಾ, ಅನಿಲ ಸಿಂಧೆ, ರಾಜಕುಮಾರ ಹಡಪದ ಇತರರಿದ್ದರು. 
ಜಿಲ್ಲೆ

ನಾಡು, ನುಡಿಗೆ ಕಸಾಪ ಕಾರ್ಯ ಅನನ್ಯ

ಚಿಟಗುಪ್ಪ: ನಾಡು-ನುಡಿ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶತಮಾನದಿಂದ ಶ್ರಮಿಸುತ್ತಿದೆ. ಇದಕ್ಕೆ ಎಲ್ಲ ಕನ್ನಡಿಗರು ಕೈಜೋಡಿಸುವುದು ಅನಿವಾರ್ಯ ಎಂದು ತಾಪಂ ಇಒ ಲಕ್ಷ್ಮೀ ಬಿರಾದಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಕಾವ ಜಾಣ ರತ್ನ ಎಂಬ ಪರೀಕ್ಷೆ ಹಾಗೂ ಕನ್ನಡ ಭಾಷೆ ಬಗ್ಗೆ ಮಕ್ಕಳಿಗೆ ಮುಟ್ಟುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಉಪನ್ಯಾಸಕ ಪೊ.ಶಾಂತಕುಮಾರ ಪಾಟೀಲ ವಿಶೇಷ ಉಪನ್ಯಾಸ ನೀಡಿ, ಕನ್ನಡ ನಾಡು, ಭಾಷೆ, ಸಾಹಿತ್ಯ ಸಂಸ್ಕೃತಿ ಪರಂಪರೆ ವೈಭವಿತವಾಗಿ ಗಟ್ಟಿಯಾಗಿ ಉಳಿಸಿ ಬೆಳೆಸಬೇಕು ಎಂಬ ಸದುದ್ದೇಶದಿಂದ ಹುಟ್ಟಿದ್ದೇ ಕನ್ನಡ ಸಾಹಿತ್ಯ ಪರಿಷತ್ ಎಂದರು.

ಪ್ರಾಚಾರ್ಯ ಡಾ.ಜಯಕುಮಾರ ಮಾತನಾಡಿ, ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡಾಭಿಮಾನದಿಂದ ಕನ್ನಡ ಸಾಹಿತ್ಯ, ನಾಡು, ನುಡಿ, ಜಲ ಹಾಗೂ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ರಚಿಸಲಾಯಿತು ಎಂದರು.

ಪರಿಷತ್ ತಾಲೂಕು ಅಧ್ಯಕ್ಷ ಅನೀಲಕುಮಾರ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಎಂ. ಡಿ.ಅಸ್ಲಾಂಮಿಯ್ಯಾ ಮಾತನಾಡಿದರು. ಗೌರವ ಅಧ್ಯಕ್ಷ ಮಹಾರುದ್ರಪ್ಪ ಅಣದೂರ, ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪಾ ಜಮಾದರ, ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಪ್ರೇಮಿಳಾ ರೆಡ್ಡಿ, ಪ್ರಮುಖರಾದ ದೀಲಿಪಕುಮಾರ ಪಸಾರೆ, ಗುಂಡಪ್ಪ ಕೋರಿ, ಸಂಜೀವನ ಬೋಸ್ಲೆ, ಸಂತೋಷ ತಾಂಡೂರ, ಬಾಲಾಜಿ, ಡಾ ಚಿತ್ರಶೇಖರ ಚೆರಳ್ಳಿ, ಮಲ್ಲಿಕಾರ್ಜುನ ತಿರಲಾಪುರ, ಉಮೇಶ, ಪವನಕುಮಾರ, ಗೀತಾಶ್ರೀ, ಡಾ.ಚನ್ನಮ್ಮ, ಡಾ.ಪಾರ್ವತಿ ಇತರರಿದ್ದರು.

ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಚುನಾಯಿತ ಪ್ರತಿನಿಧಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆತ್ತಿದ್ದು, ಈಗಾಗಲೇ ೨ನೇ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಡಾ ಚಂದ್ರಶೇಖರ ಪಾಟೀಲ ತಲಾ ೨೦ ಲಕ್ಷ ರೂ.ಘೋಷಣೆ ಮಾಡಿದ್ದಾರೆ. ಆದಷ್ಟು ಬೇಗ ಕನ್ನಡ ಭವನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸುತ್ತಾರೆ ಎಂಬ ವಿಶ್ವಾಸ ನಂಬಿಕೆ ನನ್ನಗಿದೆ.

| ಅನಿಲಕುಮಾರ ಸಿಂಧೆ ಕಸಾಪ ತಾಲೂಕು ಅಧ್ಯಕ್ಷ