ಚಿತ್ರದುರ್ಗ: ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ಆಯೋಜಿಸುವ ಶಿವರಾತ್ರಿ ಮಹೋತ್ಸವ ಮಧ್ಯ ಕರ್ನಾಟಕದ ನಾಡಹಬ್ಬವನ್ನಾಗಿ ಆಚರಿ ಸ ಬೇಕಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿದರು.
ಕಬೀರಾನಂದಾಶ್ರಮದಿಂದ ಫೆಬ್ರವರಿ 20ರಿಂದ 26ರವರೆಗೆ ಆಯೋಜಿಸಿರುವ 95ನೇ ಶಿವರಾತ್ರಿ ಮಹೋತ್ಸವದ ಅಂಗವಾಗಿ ಆಶ್ರಮದಲ್ಲಿ ಶನಿವಾರ ಕರೆದಿದ್ದ ಪೂರ್ವ ಭಾವಿಸಭೆ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವ,ತರಬಾಳು ಹುಣ್ಣಿಮೆ ಮಾದರಿ ಶಿವರಾತ್ರಿ ಮ ಹೋತ್ಸವನ್ನು ಅದ್ದೂರಿಯಿಂದ ಆಚರಿಸಬೇಕು.
ಶ್ರೀ ಶಿವಲಿಂಗಾನಂದ ಶ್ರೀಗಳು ಉತ್ಸವ ಮೂರ್ತಿ ಆಗಿರಬೇಕು,ನಾವೆಲ್ಲರೂ ಸೇರಿ ಉತ್ಸವ ಯಶಸ್ವಿಗೊಳಿಸಬೇಕು. ಇದಕ್ಕೆ ಭಕ್ತರ ನೆರವು,ಸ ಹಕಾರ ಅಗತ್ಯವಿದೆ.ರಾಜ್ಯ,ಅಂತಾರಾಜ್ಯ ಕಲಾವಿದರನ್ನು ಕರೆಸ ಬೇಕು. ಈವರೆಗೆ ನಡೆ ದಿರುವ ಈ ಉತ್ಸವದ ಕಾರ‌್ಯಾಧ್ಯಕ್ಷರನ್ನು ಸನ್ಮಾನಿಸಲಾ ಗುವುದು ಎಂದರು.
ಸಾನಿಧ್ಯ ವಹಿಸಿದ್ದ ಶಿವಲಿಂಗಾನಂದ ಶ್ರೀಗಳು ಮಾತನಾಡಿ,ಚಿತ್ರದುರ್ಗ ಹಿಂದು ಮಹಾ ಗಣಪತಿ ಶೋಭಾಯಾತ್ರೆ ದೇಶಾದ್ಯಂತ ಹೆಸರಾಗಿ ದೆ. ಇದಕ್ಕೆ ಕಾರಣ ಭಕ್ತರ ಸಹಕಾರ. ಅವರ ನೆರವಿನಿಂದ ಯಾವುದೇ ಕಾರ‌್ಯಕ್ರಮವನ್ನಾದರೂ ವಿಜೃಂಭಣೆಯಿಂದ ಆಚರಿಸ ಬಹುದಾಗಿದೆ ಎಂದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ,ಈ ಕಾರ‌್ಯಕ್ರಮಕ್ಕಾಗಿ ಭಕ್ತರು ತಮ್ಮ ಒಂದು ದಿನದ ದುಡಿಮೆಯನ್ನು ಕೊಡಬೇಕು. ನಗರ ದಲ್ಲಿ ಪಾದಯಾತ್ರೆ ಮೂಲಕ ಜನರನ್ನು ಕಾರ‌್ಯಕ್ರಮಕ್ಕೆ ಆಹ್ವಾನಿಸಿ,ದೇಣಿಗೆ ಸಂಗ್ರಹಿಸ ಬೇಕಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಅಧ್ಯಕ್ಷ ಬದ್ರಿನಾಥ್,ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್,ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ‌್ಯದರ್ಶಿ ಗೋಪಾಲಸ್ವಾಮಿನಾಯ ಕ್ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಕಾರ‌್ಯದರ್ಶಿ ವಿ.ಎಲ್.ಪ್ರಶಾಂತ್ 94ನೇ ಶಿವರಾತ್ರಿ ಮಹೋತ್ಸವಕ್ಕೆ 24. 27 ಲಕ್ಷ ರೂ.ಖರ್ಚಾಗಿದೆ,ಆದರೆ ದೇಣಿಗೆ ಸಂಗ್ರಹವಾಗಿದ್ದು 14 ಲಕ್ಷ ರೂ.ಗಳೆಂದರು.
ಪತ್ರಕರ್ತ ಉಜ್ಜನಪ್ಪ,ಮಂಜುನಾಥ ಗುಪ್ತ,ನಗರಸಭಾ ಸದಸ್ಯ ವೆಂಕಟೇಶ್,ಕುಡಾ ಮಾಜಿ ಸದಸ್ಯ ರೇಖಾ,ವರ್ತಕರಾದ ವೆಂಕಟೇಶ್,ರಾ ಮಮೂರ್ತಿ,ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್,ಗಣಪತಿಶಾಸ್ತ್ರಿ,ತಿಪ್ಪೇಸ್ವಾಮಿ,ನಿರಂಜನಮೂರ್ತಿ,ತಿಪ್ಪೇಶಯ್ಯ,ಧರ್ಮಪ್ರಸಾದ್,ಸುರೇಂ ದ್ರ ಇದ್ದರು.ಸುಬ್ರಾಯ್‌ಭಟ್ಟರು ವೇದಘೋಷ ಮಾಡಿದರು. ಸುಮನಾ ಪ್ರಾರ್ಥಿಸಿದರು,ಮುರುಗೇಶ್ ನಿರೂಪಿಸಿದರು.
--