ಸುರಪುರ: ಇಲ್ಲಿನ ರಂಗAಪೇಟೆಯ ಕನ್ನಡ ಸಾಹಿತ್ಯ ಸಂಘದ ೮೨ನೇ ನಾಡಹಬ್ಬ ಮಹೋತ್ಸವ ನಿಮಿತ್ತ ಗುರುವಾರ ಬೆಳಗ್ಗೆ ಭುವನೇಶ್ವರಿ ದೇವಿಗೆ ರಾಮಭಟ್ ಜೋಶಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುಗೂರೇಶ ವಾರದ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ೮೨ನೇ ನಾಡಹಬ್ಬ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ೫ ದಿನ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ಹೆಸರಾಂತ ವಾಗ್ಮಿಗಳು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ. ಖ್ಯಾತ ಹಾಸ್ಯ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಾಧ್ಯಕ್ಷ ಶ್ರೀರಂಗ ಮಿರಿಯಾಲ, ಉಪಾಧ್ಯಕ್ಷರಾದ ಶರಣಗೌಡ ಪಾಟೀಲ್ ಜೈನಾಪುರ, ಯಂಕಣ್ಣ ಗದ್ವಾಲ್, ಪ್ರಧಾನ ಕಾರ್ಯದರ್ಶಿ ಮುದ್ದಪ್ಪ ಅಪ್ಪಾಗೋಳ, ಕೋಶಾಧ್ಯಕ್ಷ ರವಿಕುಮಾರ ತ್ರಿವೇದಿ, ರಘುರಾಮ್ ಕಡಬೂರ, ಪ್ರಕಾಶ ಅಲಬನೂರ, ಬಸವರಾಜ ಚಟ್ಟಿ, ಮಲ್ಲಿಕಾರ್ಜುನರೆಡ್ಡಿ ಇತರರಿದ್ದರು.