ಜಿಲ್ಲೆ

ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾದವರಲ್ಲ: ಕೆ.ಎಸ್.ಲಿಂಗೇಶ್

ಬೇಲೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣಕ್ಕೂ ಮುನ್ನ ಪ್ರತೀ ತಾಲೂಕಿನಿಂದ ಮೈತ್ರಿಕೆ(ಮಣ್ಣು) ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಕೆಂಪೇಗೌಡ ರಥವು ಸೋಮವಾರ ಸಂಜೆ ಬೇಲೂರಿಗೆ ಆಗಮಿಸಿದ ಸಂದರ್ಭ ಶ್ರೀಚನ್ನಕೇಶವ ದೇಗುಲದ ಆವರಣ ತಾಲೂಕು ಆಡಳಿತದಿಂದ ಸ್ವಾಗತಿಸಲಾಯಿತು.


ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ,ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ನಮ್ಮ ನಾಡಿನ ಸಂಸ್ಕೃತಿಯನ್ನು ಬಹು ಎತ್ತರಕ್ಕೆ ಹಾರಿಸಿದವರು. ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿದ್ದ?್ಟೇ ಅಲ್ಲದೆ ಕೆರೆ ಕಟ್ಟೆಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಿದವರು. ಎಲ್ಲ ವರ್ಗದ ವ್ಯಾಪಾರಸ್ಥರಿಗೂ ಅವಕಾಶ ಮಾಡಿ ಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಜಾತಿ ಧರ್ಮ ಎನ್ನದೆ ಒಗ್ಗಟ್ಟಾಗಿ ಬದುಕಲು ಮುನ್ನಡಿ ಬರೆದಂತವರೆ ನಮ್ಮ ಕೆಂಪೇಗೌಡರು. ಅವರು ಕಟ್ಟಿದ ಬೆಂಗಳೂರು ದೇಶಕ್ಕೆ ಮಾದರಿಯಾಗಿ ಐಟಿಬಿಟಿ ಕ್ಷೇತ್ರದಲ್ಲಿ ಬೆಳೆಯುವ ಮೂಲಕ ವಿಶ್ವದಲ್ಲೆ ತನ್ನ ಛಾಪು ಮೂಡಿಸಿದವರು. ಈ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಈಗಾಗಲೇ ನಿರ್ಮಾಣವಾಗಿದ್ದು, ಸರ್ಕಾರ ಪ್ರತಿಮೆ ಅನಾವರಣ ಮಾಡಲು ಪೂರ್ವಸಿದ್ದತೆ ಮಾಡಿದ್ದು ಅಂದು ಪ್ರಧಾನಿ ಮೋದಿಯವರು ಲೋಕಾರ್ಪಣೆ ಗೊಳಿಸಲಿದ್ದಾರೆ. ಪ್ರತಿಮೆ ಸ್ಥಳದಲ್ಲಿ ಉದ್ಯಾನವನ ನಿರ್ಮಿಸುವ ಉದ್ದೇಶದಿಂದ ಪ್ರತಿ ತಾಲೂಕಿನಿಂದ ಮೈತ್ರಿಕೆ ಸಂಗ್ರಹಿಸಲಾಗುತ್ತಿದೆ ಎಂದರು.


ಜೆಡಿಎಸ್ ಯುವ ಅಧ್ಯಕ್ಷ ಉಮೇಶ್ ಮಾತನಾಡಿ, ನಾಡ ಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ. ಆದರೆರಾಜ್ಯ ಸರ್ಕಾರ ಮೈತ್ರಿಕೆ ರಥದಲ್ಲಿ ಒಕ್ಕಲಿಗರಿಗೆ ಅಪಮಾನ ಮಾಡಿದ್ದಾರೆ. ನಮ್ಮ ಪೂಜ್ಯ ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲನಂದನಾಥ ಸ್ವಾಮೀಜಿ, ಕರ್ನಾಟಕದ ಏಕೈಕ ಪ್ರಧಾನಿ ಎಚ್.ಡಿ.ದೇವೇಗೌಡರ ಬಾವಚಿತ್ರ ಹಾಕದೆ ಅಪಮಾನವೆಸಗಿದ್ದಾರೆ. ಇದು ಕೇವಲ ಬಿಜೆಪಿ ಸರ್ಕಾದ ಕಾರ್ಯಕ್ರಮದಂತೆ ಬಿಂಬಿಸಲಾಗುತ್ತಿದೆ ಎಂದರು.


ಬಿಜೆಪಿ ರಾಜ್ಯ ರೈತ ಮೋರ್ಚ ಕಾರ್ಯದರ್ಶಿ ರೇಣುಕುಮಾರ್ ಮಾತನಾಡಿ, ಸರ್ಕಾರ ದೂರದ ಯೋಚನೆಯೊಂದಿಗೆ ಕಾರ್ಯಕ್ರಮ ಮಾಡುತ್ತಿದೆ. ಇದರಲ್ಲಿ ಯಾವುದೆ ವ್ಯಕ್ತಿಗಾಗಲಿ ಅವಮಾನಿಸುವ ಪ್ರವೃತ್ತಿ ನಮ್ಮ ಪಕ್ಷದ ಸಂಸ್ಕೃತಿಯಲ್ಲ. ಅಲ್ಲದೆ ಟೀಕೆ ಟಿಪ್ಪಣಿಗಳಿಗೆ ಹೆದರುವ ಪಕ್ಷವಲ್ಲ. ದೇಶ ಕಂಡ ಅಪ್ರತಿಮ ನಾಯಕ ದೇವೇಗೌಡರು, ಸ್ವಾಮೀಜಿಗಳ ಮೇಲೆ ಅಪಾರ ಗೌರವವಿದೆ. ಸಣ್ಣಪುಟ್ಟ ತಪ್ಪುಗಳನ್ನು ಬಗೆಹರಿಸೋಣ ಎಂದರು.


ತಹಶಿಲ್ದಾರ್ ರಮೇಶ್, ತಾಪಂ ಇಓ ಸುನೀತಾ, ಜೆಡಿಎಸ್ ತಾಲೂಕು ಅಧ್ಯಕ್ಷ ತೊಚ ಅನಂತ ಸುಬ್ಬರಾಯ್, ಪುರಸಭೆ ಸದಸ್ಯ ಜಗದೀಶ್, ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ದೂರಿ ಕುಮಾರ್, ಮುಖಂಡರಾದ ಅಶೋಕ್, ರಂಗನಾಥ್, ಜಯರಾಮ್, ನವೀನ್, ಪ್ರಕಾಶ್ ಇದ್ದರು.