ಚಿತ್ರದುರ್ಗ: ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ಜೂ. 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ, ಜು. 2ರಂದು ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನ ಆಚರಿಸಲಾಗುವುದು ಎಂದರು.
ತರಾಸು ರಂಗಮಂದಿರ ಅಥವಾ ಡಿಸಿ ಕಚೇರಿಯಲ್ಲಿ 27ರಂದು ಬೆಳಗ್ಗೆ 11ಕ್ಕೆ ಕೆಂಪೇಗೌಡರ ಜಯಂತಿ ಆಯೋಜಿಸಲು ಶೀಘ್ರದಲ್ಲೇ ಸ್ಥಳ, ಉಪನ್ಯಾಸ ಸಂಬಂಧ ಹೆಸರು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಜಗನ್ನಾಥ್, ಉಪಾಧ್ಯಕ್ಷ ಮಂಜುಕುಮಾರ್, ನಿರ್ದೇಶಕರಾದ ರಂಗಧಾಮಯ್ಯ, ಆರ್. ಪರಮೇಶ್ವರ, ನರೇಂದ್ರಬಾಬು, ಆರ್. ಚಿದಾನಂದಪ್ಪ ಇತರರಿದ್ದರು.
ವಚನ ಸಾಹಿತ್ಯ ಸಂರಕ್ಷಣಾ ದಿನ: ಜು. 2ರಂದು ಬೆಳಗ್ಗೆ 11ಕ್ಕೆ ಡಿಸಿ ಕಚೇರಿಯಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನ ಆಚರಣೆಗೆ ತೀರ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ವಚನ ಸಾಹಿತ್ಯಕ್ಕೆ ಡಾ.ಫ.ಗು. ಹಳಕಟ್ಟಿಯವರ ಕೊಡುಗೆ ಅಮೂಲ್ಯವಾದುದು. ಈ ಹಿನ್ನಲೆಯಲ್ಲಿ ವಚನ ಸಾಹಿತ್ಯ ಕುರಿತು ಕವಿಗೋಷ್ಠಿ ಆಯೋಜಿಸಬೇಕು ಎಂದರು.