ಶ್ರೀರಂಗಪಟ್ಟಣ: ತಾಲೂಕಿನ ಕೆ.ಶೆಟ್ಟಹಳ್ಳಿ ವೃತ್ತದ ಕಿರಂಗೂರು ಗ್ರಾಮದ ನಾಡಕಚೇರಿಗೆ ಬುಧವಾರ ಮಂಡ್ಯ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕೆ.ಶೆಟ್ಟಹಳಿ ಹೋಬಳಿಗೆ ಸೇರಿದ 2ನೇ ನಾಡ ಕಚೇರಿಯಲ್ಲಿರುವ ಹಾಗೂ ವಿಲೇವಾರಿ ಆಗಬೇಕಿರುವ ಕಡತಗಳ ಪರಿಶೀಲನೆ ಜತೆಗೆ ಕಚೇರಿ ಸಿಬ್ಬಂದಿ ಕಾರ್ಯವೈಖರಿಯನ್ನು ಜತೆಗಿದ್ದ ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಅವರೊಂದಿಗೆ ಪರಿಶೀಲಿಸಿದರು.
ಇದರೊಂದಿಗೆ ತಾಲೂಕಿನ ಹಳೇ ಕಿರಂಗೂರು ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ನಾಡ ಕಚೇರಿ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ ಸ್ಥಳ ಹಾಗೂ ಅರ್ಧಕ್ಕೆ ನಿಂತ ಕಾಮಗಾರಿ ವೀಕ್ಷಣೆ ನಡೆಸಿ ಜತೆಗಿದ್ದ ತಾಲೂಕು ಸಿಬ್ಬಂದಿಯಿಂದ ಮಾಹಿತಿ ಪಡೆದು ನಿರ್ಮಾಣ ಮುಂದುವರಿಸುವ ಕುರಿತು ಚರ್ಚಿಸಿ ತೆರಳಿದರು.