ಜಿಲ್ಲೆ

ನಾಟಕೋತ್ಸವ

Dharwada - Vikram Nadiger

ಧಾರವಾಡ: ನಗರದ ಸ್ನೇಹಿತರು ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೆ. 9, 10ರಂದು ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏಕವ್ಯಕ್ತಿ ರಂಗಪ್ರಯೋಗ ನಾಟಕೋತ್ಸವ ಆಯೋಜಿಸಲಾಗಿದೆ.
ಸೆ. 9ರಂದು ಸಂಜೆ 6 ಗಂಟೆಗೆ ರಂಗ ನಿರ್ದೇಶಕ ಡಾ. ಪ್ರಕಾಶ ಗರುಡ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಹರ್ಷ ಡಂಬಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೆರಿ ಆಗಮಿಸುವರು. ನಾಗೇಂದ್ರ ದೊಡಮನಿ ಅಧ್ಯಕ್ಷತೆ ವಹಿಸುವರು. ನಂತರ ಅಕ್ಷರಸ್ಥ ಸಾವಿತ್ರಿಬಾಯಿ ಫುಲೆ ನಾಟಕವನ್ನು ಎ.ಎಸ್. ಶೈಲಜಾ ಪ್ರಕಾಶ ಪ್ರದರ್ಶಿಸಲಿದ್ದಾರೆ.
ಸೆ. 10ರಂದು ಸಕುಬಾಯಿ ಕಾಮವಾಲಿ ನಾಟಕ ಪ್ರದರ್ಶನವಾಗಲಿದ್ದು, ನುಡಿ ಸುದರ್ಶನ ಅಭಿನಯಿಸಲಿದ್ದಾರೆ. ಇದಕ್ಕೂ ಪೂರ್ವದಲ್ಲಿ ಸಮಾರೋಪ ಸಮಾಂಭ ನಡೆಯಲಿದ್ದು, ರಂಗಭೂಮಿ ಕಲಾವಿದರಾದ ಹುಲಗಪ್ಪ ಕಟ್ಟಿಮನಿ ಸಮಾರೋಪ ನುಡಿಗಳನ್ನಾಡುವರು ಎಂದು ಪ್ರಕಟಣೆ ತಿಳಿಸಿದೆ.