ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ  
ಜಿಲ್ಲೆ

ನಾಟಕ ಪ್ರದರ್ಶನ ಆ.೩ಕ್ಕೆ

ಚಿಕ್ಕಮಗಳೂರು: ಶಿವಮೊಗ್ಗದ ಸಹ್ಯಾದ್ರಿ ರಂಗ ತಂಡ ಅರ್ಪಿಸುವ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಲಕ್ಷö್ಮಣ್ ತುಕಾರಾಂ ಗೋಲೆ ಎಂಬ ವಿಶೇಷ ಸಾಮಾಜಿಕ ನಾಟಕ ಪ್ರದರ್ಶನ ಆ. ೩ರಂದು ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಏರ್ಪಡಿಸಲಾಗಿದೆ ಎಂದು ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವತತ್ವ ಪೀಠ, ಕಲಾ ಸೇವಾ ಸಂಘ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಆದಿಚುಂಚನಗಿರಿ ವಿಶ್ವ ವಿದ್ಯಾಲಯ, ಆಶ್ರಯ ಫೌಂಡೇಶನ್, ಕಲ್ಕಟ್ಟೆ ಪುಸ್ತಕದ ಮನೆ, ಜೆಸಿ ಅಂತರಾಷ್ಟಿçÃಯ ಸಂಸ್ಥೆ, ಪೂರ್ವಿ ಸುಗಮ ಸಂಗೀತ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಈ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಈ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಸವಮಂದಿರದ ಡಾ. ಬಸವ ಮರುಳುಸಿದ್ದ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪ್ರಮುಖರಾದ ಡಾ.ಮಂಜುಳ ಹುಲ್ಲಳ್ಳಿ, ಡಾ. ಸಿ.ಕೆ.ಸುಬ್ರಾಯ, ಡಾ. ರಮೇಶ್, ಕಾಂತೇಶ್ ಕದರಮಂಡಲಗಿ, ಲಯನ್ ಕುಮಾರ್, ಡಾ. ವರ್ಷ ಅಭಿಷೇಕ್, ನಾಗರಾಜ್‌ರಾವ್ ಕಲ್ಕಟ್ಟೆ, ಪ್ರದೀಪ್, ಎಂ.ಎಸ್ ಸುಧೀರ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಈ ನಾಟಕವು ಗಾಂಧಿವಾದಿ ಲಕ್ಷö್ಮಣ್ ತುಕಾರಾಂ ಗೋಲೆ ಅವರ ಜೀವನಾಧಾರಿತ ಕಥೆಯನ್ನೊಳಗೊಂಡಿದ್ದು, ವಿಶೇಷವಾಗಿ ಸ್ವತಃ ಗೋಲೆಯವರೇ ಉಪಸ್ಥಿತರಿದ್ದು ನಾಟಕವನ್ನು ವೀಕ್ಷಿಸಲಿದ್ದಾರೆ ಎಂದರು.

ಅದೇ ದಿನ ಮಧ್ಯಾಹ್ನ ೧೨ ಗಂಟೆಗೆ ನಗರದ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಇದೇ ನಾಟಕವನ್ನು ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಯುವತಿಯೋರ್ವಳನ್ನು ರೌಡಿಯಿಂದ ರಕ್ಷಿಸಲು ಹೋದ ಸಂದರ್ಭದಲ್ಲಿ ಆತನ ಕಿವಿಯನ್ನು ಕತ್ತರಿಸಿದ ಘಟನೆಯಿಂದ ಜೈಲು ಸೇರಿ ಮುಂದೆ ಪಾತಕ ಲೋಕದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಂಡು ರೇಜರ್ ಲಕನ್ ಎಂದೇ ಕುಖ್ಯಾತಿ ಪಡೆದು ೭ ವರ್ಷ ಲಕ್ಷö್ಮಣ್ ತುಕಾರಾಂ ಗೋಲೆ ಜೈಲು ಶಿಕ್ಷೆಗೊಳಗಾಗಿದ್ದರು. ಜೈಲಿನಲ್ಲಿ ಗಾಂಧೀಜಿ ಅವರ ಆತ್ಮಚರಿತ್ರೆಯನ್ನು ಓದಿ ಮನಃಪರಿವರ್ತನೆಗೊಂಡು ಸನ್ನಡತೆಯ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಗೆ ಬಿಡುಗಡೆಯಾದರು. ಇದೀಗ ಗೋಲೆ ಅವರು ಸಮಾಜಸೇವೆ, ಯೋಗ, ಧ್ಯಾನ, ಕೈದಿಗಳ ಮನಃಪರಿವರ್ತನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

೨೦೧೫ ರ ಜಿಂದಗಿ ಲೈಫ್ ರಾಷ್ಟಿçÃಯ ಪ್ರಶಸ್ತಿಗೂ ಭಾಜನರಾದ ಇವರು, ನಾಟಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಲಾ ಸೇವಾ ಸಂಘದ ಅಧ್ಯಕ್ಷ ಕೆ. ಮೋಹನ್, ಲಯನ್ಸ್ ಅಧ್ಯಕ್ಷ ಕುಮಾರ್ ಸಿ.ಎನ್, ಪ್ರಧಾನ ಕಾರ್ಯದರ್ಶಿ ಗೋಪಿಕೃಷ್ಣ, ಲಯನ್ ಜಿ.ರಮೇಶ್, ಎಂ.ಎಸ್. ಸುಧೀರ್ ಉಪಸ್ಥಿತರಿದ್ದರು.