ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಸಂತತ ಟ್ರಸ್ಟ್ ಸಹಯೋಗದಲ್ಲಿ ಜ. 25ರಂದು ಸಂಜೆ 6.45ಕ್ಕೆ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಟೂರಿಂಗ್ ಟಾಕೀಸ್ ಅಭಿನಯಿಸುವ ಉತ್ತರ ಕರ್ನಾಟಕ ಭಾಷೆಯ ಕೌಟುಂಬಿಕ ನಗೆ ನಾಟಕ "ಹುಚ್ಚರ ಸಂತೆ' ಪ್ರದರ್ಶನಗೊಳ್ಳಲಿದೆ.
ಕಿರುತೆರೆ ನಟ ಉಮೇಶ ತೇಲಿ ನಿರ್ದೇಶಿಸಿ, ನಟಿಸುವ ಈ ನಾಟಕ 200ನೇ ಪ್ರದರ್ಶನ ಇದಾಗಿದ್ದು, ಉತ್ತರ ಕರ್ನಾಟಕ ಭಾಷೆಯ ದೇಸಿ ಸೊಗಡಿನ ಹಾಸ್ಯ ನಾಟಕವಾಗಿದೆ. ನಾಟಕದಲ್ಲಿ ಸಿದ್ಧಾರ್ಥ, ಉಮೇಶ ತೇಲಿ, ಪ್ರೇಮ್ ನಿರಗಟ್ಟಿ, ಪ್ರಶಾಂತ, ಸುಕನ್ಯಾ ಅಭಿನಯಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.