ಬುರ್ಲಟ್ಟಿ ಗ್ರಾಮದ ಕಿತ್ತೂರ ತೋಟದಲ್ಲಿ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ಮುಖಂಡ ಅಶೋಕ ಮಗದುಮ್​ ಚಾಲನೆ ನೀಡಿದರು. ಅಣ್ಣಪ್ಪ ಖೋತ, ಅಪ್ಪಾಸಾಬ ಅವತಾಡೆ, ರುನಾಥ ಗವಾನೆ, ಸದಾಶಿವ ಚೌಗಲಾ, ದಾನಪ್ಪ ಅಡಳಟ್ಟಿ ಇತರರಿದ್ದರು. 
ಜಿಲ್ಲೆ

ನಾಟಕ ಕಲೆ ಉಳಿವಿಗೆ ಪ್ರೋತ್ಸಾಹ ಅಗತ್ಯ

ಅಥಣಿ ಗ್ರಾಮೀಣ: ಜನರ ಮನಸ್ಸು ಪರಿವರ್ತಿಸುವಲ್ಲಿ ನಾಟಕಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕಾಂಗ್ರೆಸ್​ ಮುಖಂಡ ಅಶೋಕ ಮಗದುಮ್​ ಹೇಳಿದರು. ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ಕಿತ್ತೂರ ತೋಟದ ವಸತಿ ಪ್ರದೇಶದಲ್ಲಿರುವ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಗುರುವಾರ ರಾತ್ರಿ ಆಯೋಜಿಸಿದ್ದ ಅಣ್ಣನ ಒಡಲು ಬಂಗಾರದ ಕಡಲು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜದಲ್ಲಿನ ಅಂಕು&ಡೊಂಕುಗಳನ್ನು ತಿದ್ದುವ ಮೂಲಕ ಮನ ಪರಿವರ್ತಿಸುವ ನಾಟಕ ಕಲೆಗಳ ಉಳಿವಿಗೆ ಕಲಾಭಿಮಾನಿಗಳು ಪ್ರೋತ್ಸಾಹಿಸುವುದು ಅಗತ್ಯ ಎಂದರು.

ಕೊಕಟನೂರ ಪಿಕೆಪಿಎಸ್​ ಅಧ್ಯ ಅಣ್ಣಪ್ಪ ಖೋತ ಅಧ್ಯತೆ ವಹಿಸಿದ್ದರು. ಕೆಎಂಎ್​ ನಿರ್ದೇಶಕ ಅಪ್ಪಾಸಾಬ ಅವತಾಡೆ ಮಾತನಾಡಿದರು.
ಇದಕ್ಕೂ ಪೂರ್ವ ವೀರಭದ್ರೇಶ್ವರ ಮೂರ್ತಿಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ಜರುಗಿತು. ನಂತರ ಕುಂಭೋತ್ಸವದೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು. ರುನಾಥ ಗವಾನೆ, ಸದಾಶಿವ ಚೌಗಲಾ, ದಾನಪ್ಪ ಅಡಳಟ್ಟಿ, ಲಕ್ಷ$್ಮಣ ಖೋತ, ಬಸಪ್ಪ ಠಕ್ಕಳಕಿ, ಗಜಾನಂದ ಕಿತ್ತೂರ, ರಾವಸಾಬ ಖೋತ, ಕಾಡಪ್ಪ ಕಾಳಾಪಾಟೀಲ, ಮಹೇಶ ಚಂಡಕಿ, ಸದಾಶಿವ ಕನಾಳ, ಬಿ.ಬಿ. ಖೋತ, ರಾಜಕುಮಾರ ಪೂಜಾರಿ ಇತರರಿದ್ದರು.