ನಿಪ್ಪಾಣಿ: ಬದಲಾವಣೆ ಜಗದ ನಿಯಮ ಆದ್ದರಿಂದ ಬದಲಾವಣೆಯನ್ನು ನಾಗರಿಕರು ಒಪ್ಪಿಕೊಳ್ಳಬೇಕು ಎಂದು ಕಾಗವಾಡ ಶಿವಾನಂದ
ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾಪಕ ಬಿ.ಎ.ಪಾಟೀಲ ಅಭಿಪ್ರಾಯಪಟ್ಟರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಪದವಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಏಕರೂಪ ನಾಗರಿಕ ಸಂಹಿತೆ ವಿಷಯದ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿ, ಜಗತ್ತಿ ನಲ್ಲಿ 80ಕ್ಕೂ ಹೆಚ್ಚು ದೇಶಗಳು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿವೆ. ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಯಿಂದ ಆಗಬಹುದಾದ ಬದಲಾಣೆಗಳ ಕುರಿತು ವಿವರಿಸಿದರು.
ವಿದ್ಯಾರ್ಥಿಗಳಾದ ಅಭಿಷೇಕ ಡೆರೆ, ಸ್ವರ್ಣಿಕಾ ಪಾಟೀಲ, ಪೂಜಾ ಚೌಗಲಾ, ಸಮೃದ್ದಿ ಗಿಬಸೆ, ಆದರ್ಶ ವರಾಳೆ ವಿಷಯದ ಕುರಿತು ವಿಚಾರ ಮಂಡಿಸಿದರು. ಡಾ.ಎಂ.ಎಂ.ಹುರಳಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ್ಯ ಡಾ.ಆರ್.ಖರಾಬೆ, ಡಾ.ಅತು ಕುಮಾರ ಕಾಂಬಳೆ, ಪ್ರೊ.ವಿ.ಬಿ.ಧಾರವಾಡ, ಡಾ. ಜಿ.ಎ.ಚೌಗಲಾ, ಡಾ.ಎಂ.ಡಿ.ಗುರವ, ಡಾ.ಬಿ.ಎಂ.ಜನಗೌಡ, ಡಾ.ಅಶೋಕ ರಾಠೋಡ, ಪ್ರೊ.ಬಿ.ಜಿ.ಉಳ್ಳೆಗಡ್ಡಿ, ಪ್ರೊ.ಎಸ್.ಬಿ.ಪಾಟೀಲ, ಡಾ.ಎ.ವೈ.ಕೆಂಚಕ್ಕನವರ, ಎನ್.ಎಸ್.ಬೆಳಗಾಂವಕರ, ಆರ್.ಎಸ್.ಸೂರೆ, ಪ್ರೊ.ಪಿ.ಆರ್.ಕಮತೆ, ಪ್ರೊ.ಶಶಿಧರ ಕುಂಬಾರ, ಚೈತ್ರಾ ಕೌಲಾಪುರೆ, ಎಸ್.ಎಸ್.ಕೋಠಿವಾಲೆ, ಎಸ್.ಎಸ್.ಘೋರ್ಪಡೆ, ವೈಜಯಂತಿ ಪಾಟೀಲ, ಪೂಜಾ ಗಾವಡೆ, ಆರತಿ ದಿವಟೆ ಇತರರಿದ್ದರು.