ಬಾಗಲಕೋಟೆ : ಸ್ನೇಕ್ ಕ್ಯಾಚರ್ ಖ್ಯಾತಿಯ ಡೇನಿಯಲ್ ನ್ಯೂಟನ್ (43) ದುರಾದೃಷ್ಟವಶಾತ್ ನಾಗರ ಹಾವಿನ ಕಡಿತದಿಂದಲೇ ಮಂಗಳವಾರ ಇಹಲೋಕ ತ್ಯಜಿಸುವಂತಾಗಿದೆ.
ಬಾಗಲಕೋಟೆ ಜಯನಗರ ನಿವಾಸಿ ಡೇನಿಯಲ್ ಸೀಗಿಕೇರಿ ಗ್ರಾಮದ ಮನೆಯೊಂದರಲ್ಲಿದ್ದ ನಾಗರ ಹಾವನ್ನು ಹಿಡಿಯುವ ವೇಳೆ ಕಚ್ಚಿದ್ದರಿಂದ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಡೇನಿಯಲ್ ಮೃತಪಟ್ಟಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಇವರು, ತಮ್ಮ ದೇಹವನ್ನು ದಾನ ಮಾಡಿದ್ದರು. ಇದುವರೆಗೆ ಡೇನಿಯಲ್ ವಿವಿಧ ರೀತಿಯ ಒಟ್ಟು 3279 ಹಾವನ್ನು ಹಿಡಿದು ರಕ್ಷಣೆ ಮಾಡಿದ್ದರು. ಇದರಲ್ಲಿ 1036 ನಾಗರಹಾವು ಎಂಬುದು ವಿಶೇಷ. ಒಟ್ಟು 75 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದ ಡೇನಿಯಲ್ ಸಾವಿನ ಮನೆ ತಟ್ಟಿ ಬಂದಿದ್ದರು.
ಇದುವರೆಗೆ ಡೇನಿಯಲ್ ವಿವಿಧ ರೀತಿಯ ಒಟ್ಟು 3279 ಹಾವನ್ನು ಹಿಡಿದು ರಕ್ಷಣೆ ಮಾಡಿದ್ದರು. ಇದರಲ್ಲಿ 1036 ನಾಗರಹಾವು ಎಂಬುದು ವಿಶೇಷ. ಒಟ್ಟು 75 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದ ಡೇನಿಯಲ್ ಸಾವಿನ ಮನೆ ತಟ್ಟಿ ಬಂದಿದ್ದರು.
ಕಳೆದ ಜೂನ್‌ನಲ್ಲಿ ನಾಗರ ಹಾವಿನ ಮರಿ ಕಚ್ಚಿದ ಪರಿಣಾಮ ಡೇನಿಯಲ್ ಸ್ಥಿತಿ ಗಂಭೀರವಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡಿ ಬದುಕುಳಿದಿದ್ದರೂ ಪುನಃ ಹಾವು ಹಿಡಿಯುವ ಕಾರ್ಯ ಮುಂದುವರಿಸಿದ್ದರು. ಜಿಲ್ಲೆ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಸ್ನೇಕ್ ಡ್ಯಾನಿ ಎಂದೇ ಖ್ಯಾತಿ ಹೊಂದಿದ್ದರು. ಹಾವಿನ ಸಂರಕ್ಷಣೆಗೆ ಪಣ ತೊಟ್ಟಿದ್ದ ಡೇನಿಯಲ್ ಹಾವಿನಿಂದಲೇ ಸಾವನ್ನಪ್ಪಿರುವುದು ದುರಾದೃಷ್ಟ.