ಜಿಲ್ಲೆ

ನಾಗರ ಹಾವು ರಕ್ಷಣೆ


ಮಡಿಕೇರಿ : ಮನೆಯೊಳಗೆ ಸೇರಿಕೊಂಡಿದ್ದ ನಾಗರ ಹಾವನ್ನು ಉರಗ ಪ್ರೇಮಿ ಬೊಪ್ಪಂಡ ರೋಶನ್ ರಕ್ಷಿಸಿದ್ದಾರೆ.

ಸಿದ್ದಾಪುರ ಅಮ್ಮತಿ ಕಾರ್ಮಾಡು ಗ್ರಾಮದ ನೆಲ್ಲಮಕ್ಕಡ ಟಿ.ಅಪ್ಪಯ್ಯ ಅವರ ಮನೆಯ ಅಡುಗೆ ಕೋಣೆಯ ಬಾಕ್ಸ್ ಒಳಗೆ ನಾಗರಹಾವು ಸೇರಿ ಕೊಂಡಿತ್ತು. ಈ ಬಗ್ಗೆ ಬೊಪ್ಪಂಡ ರೋಶನ್‌ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹಾವನ್ನು ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವುಗಳನ್ನು ಕಂಡರೆ ಕೊಲ್ಲದೆ ಮೊ. 70223 73921 ಕರೆ ಮಾಡುವಂತೆ ರೋಶನ್ ಮನವಿ ಮಾಡಿದ್ದಾರೆ