ಜಿಲ್ಲೆ

ನಾಗಮಾರಪಳ್ಳಿ ಸಾಧನೆ ಅಪಾರ

ಔರಾದ್: ಸಹಕಾರ ರಂಗದ ದಿಗ್ಗಜ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಂತಪುರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಶೋಕ ಪಾಟೀಲ್ ಸಲಹೆ ನೀಡಿದರು.

ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಲಿತ ಸಂಘರ್ಷ ಸಮಿತಿಯು ಬುಧವಾರ ದಿ. ಗುರುಪಾದಪ್ಪ ನಾಗಮಾರಪಳ್ಳಿ ಜನ್ಮದಿನ ನಿಮಿತ್ತ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ನಾಗಮಾರಪಳ್ಳಿ ಮಾಡಿರುವ ಸಾಧನೆ ಅಪಾರ. ಸ್ವಸಹಾಯ ಗುಂಪುಗಳ ರಚನೆ ಮೂಲಕ ಮಹಿಳಾ ಸಬಲೀಕರಣ ಮಾಡಿದ್ದಾರೆ ಎಂದು ಬಣ್ಣಿಸಿದರು.

ದಸಂಸ ತಾಲೂಕು ಸಂಚಾಲಕ ಧನರಾಜ ಮುಸ್ತಾಪುರೆ ಮಾತನಾಡಿ, ನಮ್ಮೊಂದಿಗೆ ಗುರುಪಾದಪ್ಪ ನಾಗಾಮಾರಪಳ್ಳಿ ಇಲ್ಲದಿದ್ದರೂ ಅವರು ಮಾಡಿದ ಅಭಿವೃದ್ಧಿ, ಸಾಧನೆಗಳು ಜೀವಂತವಾಗಿವೆ ಎಂದು ಸ್ಮರಿಸಿದರು.

ಡಾ.ಮಹ್ಮದ್ ವಾಜೀದ್, ಗಣಪತಿ ದೇಶಪಾಂಡೆ, ತುಕಾರಾಮ ಹಸನ್ಮುಖಿ, ಮಂಜು ಸ್ವಾಮಿ, ಸತೀಶ ವಗ್ಗೆ, ಗಣಪತಿ ವಾಸುದೇವ, ಅರುಣ ಇತರರಿದ್ದರು.