ಮಂಡ್ಯ: ನಾಗಮಂಗಲ ಪಟ್ಟಣದ 18ನೇ ವಾರ್ಡ್‌ನ ಜೆಡಿಎಸ್ ಪುರಸಭೆ ಸದಸ್ಯನ ನಾಪತ್ತೆಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ
ನನ್ನ ಮಗನನ್ನು ಅಪಹರಣ ಮಾಡಲಾಗಿದೆ ಎಂದು ಸದಸ್ಯನ ತಂದೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪುರಸಭೆ ಸದಸ್ಯ ಮಂಜುನಾಥ ಗುರುವಾರ ತಡರಾತ್ರಿ ಮೆಡಿಕಲ್ ವ್ಯಾಪಾರ ಮುಗಿಸಿ ಮನೆಗೆ ಬರುವಾಗ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಮದಲಹಳ್ಳಿ ಗೇಟ್‌ನಿಂದ ಅಪಹರಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ 12 ಹಾಗೂ ಕಾಂಗ್ರೆಸ್‌ನ 11 ಸದಸ್ಯರು ಗೆಲುವು ಸಾಧಿಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸದಸ್ಯನ ಪತ್ತೆಗೆ ಜಾಲ ಬೀಸಿದ್ದಾರೆ.