ದಾವಣಗೆರೆ: ಮಹಿಳೆಯರ ಹಬ್ಬವೆಂದೇ ಹೆಸರಾದ ಶ್ರಾವಣ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದೆ. ಭಾನುವಾರ, ಸೋಮವಾರ ಎರಡೂ ದಿನದಂದು ನಾಗರ ಪಂಚಮಿಯನ್ನು ಭಕ್ತಿ ಯಿಂದ ಆಚರಿಸಲಾಯಿತು.
ಪಂಚಮಿ ಅಂಗವಾಗಿ ಶೇಂಗಾ, ಕಡಲೆ, ಎಳ್ಳು ಮೊದಲಾದ ಉಂಡೆಗಳನ್ನು ಕಟ್ಟಲಾಗುತ್ತದೆ. ಸೋಮವಾರ ವಿವಿಧೆಡೆ ಹುರುಳಿಕಾಳು ಪಾನಕ ಹಾಗೂ ಹೋಳಿಗೆ ಮಾಡಿನೈವೇದ್ಯ ಸಲ್ಲಿಸಲಾಯಿತು.
ಹಳ್ಳಿಗಳಲ್ಲಿ ಮನೆಗಳಲ್ಲಿಯೇ ಜೋಕಾಲಿ ಜೀಕಿ ಮಕ್ಕಳು ಖುಷಿಪಟ್ಟರೆ, ದೊಡ್ಡವರು ಮರಗಳಿಗೆ ಜೋಕಾಲಿ ಕಟ್ಟಿಕೊಂಡು ಆಡಿದರು.
ಶ್ರಾವಣದ ನಂತರ ಕುಟುಂಬದ ಹೆಣ್ಣುಮಕ್ಕಳಿಗೆ ಹೊಸ ಸೀರೆ ಕುಪ್ಪಸದೊಂದಿಗೆ ಕಾಯಿ - ಉಂಡೆ ಕೊಡುವ ಸಂಪ್ರದಾಯ ಹಲವೆಡೆ ಕಂಡುಬಂದಿತು.