ಚಿತ್ರದುರ್ಗ: ಡಿಸಿಆರ್‌ಜಿ, ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು 7ನೇ ವೇತನ ಆಯೋಗದ ಅನುಸಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಪದಾಧಿಕಾರಿಗಳು, ನಿವೃತ್ತ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಷ್ಟವಾಗಿರುವ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಲು ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
2022ರ ಜು. 1ರಿಂದ 2024ರ ಜು. 31ರ ಅವಧಿಯಲ್ಲಿ ನಿವೃತ್ತರಾದ ನೌಕರರು 6ನೇ ವೇತನ ಆಯೋಗದಂತೆ ಸೌಲಭ್ಯ ಪಡೆಯುತ್ತಿದ್ದು, ವಂಚಿತರಾಗಿದ್ದಾರೆ. ಹೀಗಾಗಿ 7ನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು.
ವೇದಿಕೆ ರಾಜ್ಯ ಸಂಚಾಲಕ ಎಚ್.ಗೋವಿಂದಯ್ಯ, ಜಿಲ್ಲಾ ಸಂಚಾಲಕರಾದ ಡಿ.ಟಿ.ಜಗನ್ನಾಥ್, ನಾಗರಾಜಪ್ಪ, ಪದ್ಮಾವತಿ, ಬಿ.ಕೆ.ಹನುಮಂತಪ್ಪ, ಸುಗೇಂದ್ರನಾಯ್ಕ, ನೀಲಕಂಠಾಚಾರ್, ಡಿ.ದಯಾನಂದ, ರಮೇಶ್ ಮಧುರಿ, ಮಾಲತಿ ಸೇರಿ ನೂರಾರು ನಿವೃತ್ತ ನೌಕರರಿದ್ದರು.