ಜಿಲ್ಲೆ

ನವ್‌ಕೀಸ್‌ನಲ್ಲಿ ನಾಳೆ ಓರಿಯೆಂಟೇಷನ್ ಪ್ರೋಗ್ರಾಂ

ಹಾಸನ: ನಗರದ ನವ್‌ಕೀಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸೆ.30ರಂದು ಓರಿಯೆಂಟೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವೇಣುಗೋಪಾಲ ರಾವ್ ಅವರು ತಿಳಿಸಿದರು.
ಎಂ.ಎಸ್.ರಾಮಯ್ಯ ಅವರ ನವ್‌ಕೀಸ್ ತಾಂತ್ರಿಕ ಮಹಾವಿದ್ಯಾಲಯವು ನಗರದಲ್ಲಿ ಅತ್ಯಾಧುನಿಕ ತಾಂತ್ರಿಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಇಂಜಿನೀಯರ್‌ಗಳಾಗಿ ಬೆಳೆಯಲು ಸೂಕ್ತವಾದ ವಾತಾವರಣ ಒದಗಿಸುತ್ತಿದೆ. ಈ ಹಿಂದೆಯಿದ್ದ ಯಗಚಿ ಎಜುಕೇಷನ್ ಮತ್ತು ರಿಸರ್ಚ್ ಟ್ರಸ್ಟ್ ಅನ್ನು 2019-20ನೇ ಸಾಲಿನಿಂದ ಬೆಂಗಳೂರಿನ ನವ್‌ಕೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಆಶ್ರಯದಲ್ಲಿ ನಡೆಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ಕಾಲೇಜಿನಲ್ಲಿ ಅನುಭವಿ, ಪ್ರೇರಿತ ಅಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಎಐಸಿಟಿಇಯಿಂದ ಅನುಮೋದಿಸಲ್ಪಟ್ಟಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಸಂಯೋಜಿತವಾಗಿದೆ. ಕಾಲೇಜಿನಲ್ಲಿ ಸಿಎಸ್‌ಇ, ಇಸಿಇ, ಎಐ ಆ್ಯಂಡ್ ಎಂಎಲ್, ಎಐ ಆ್ಯಂಡ್ ಡಿಎಸ್ ಮತ್ತು ಸಿವಿಲ್ ಐ ಪದವಿ ವಿಭಾಗಗಳಿವೆ. ಎಂಸಿಎ ಸ್ನಾತಕೋತ್ತರ ಮತ್ತಿ ಪಿ.ಹೆಚ್‌ಡಿ ಸಂಶೋಧನೆಗಳು ಕೂಡ ನಡೆಯುತ್ತಿದೆ. ಕಾಲೇಜಿನಲ್ಲಿ ದಾಖಲಾತಿ ಪೂರ್ಣಗೊಂಡಿದ್ದು, 612 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ವರ್ಗ, ಬೋಧಕೇತರ ವರ್ಗ, ವಿದ್ಯಾರ್ಥಿ, ಪೋಷಕರೊಂದಿಗೆ ಸಮಲೋಚನೆ ನಡೆಸುವ ಉದ್ದೇಶದಿಂದ ಓರಿಯೆಂಟೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಡೀನ್ ಶ್ರೀಪಾದ ಮಾರ್ಕಾಂಡೆ, ಆಡಳಿತಾಧಿಕಾರಿ ರಾಜಲಕ್ಷ್ಮಿ, ರಾಘವೇಂದ್ರ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ಇತರರು ಉಪಸ್ಥಿತರಿದ್ದರು.