ಜಿಲ್ಲೆ

ನವೆಂಬರ್​ನಲ್ಲಿ ಮದ್ಯವರ್ಜನ ಶಿಬಿರ

ಬಸವರಾಜ ವೀರಪ್ಪ ಗರಗ

ಶಿರಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರ ಆಯೋಜಿಸುವ ಕುರಿತು ತಾಲೂಕಿನ ಬನವಾಸಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.

ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾಸಿಂ ಖಾನ್ ಮಾತನಾಡಿ, ಸರ್ಕಾರಗಳು ಮಾಡದಿರುವ ಕಾರ್ಯಗಳನ್ನು ಶ್ರೀ ಧಗ್ರಾಯೋ ಮಾಡುತ್ತಿದೆ. ಮದ್ಯವರ್ಜನ ಶಿಬಿರದಿಂದ ಅನೇಕ ಕುಟುಂಬಗಳ ಜೀವನಶೈಲಿ ಬದಲಾಗಿದೆ. ಈ ಭಾಗದಲ್ಲಿ ಮದ್ಯವರ್ಜನ ಶಿಬಿರದ ಅವಶ್ಯಕತೆಯಿದೆ. ಇದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.

ಯೋಜನಾಧಿಕಾರಿ ರಾಘವೇಂದ್ರ ನಾಯ್ಕ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಹಾಗೂ ವ್ಯವಸ್ಥಾಪನ ಸಮಿತಿ ವತಿಯಿಂದ ಮುಂದಿನ ತಿಂಗಳಲ್ಲಿ ಬನವಾಸಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ಒಂದು ವಾರಗಳ ಕಾಲ ಮದ್ಯವರ್ಜನ ಶಿಬಿರ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಶಿಬಿರ ಸಂಬಂಧ ವ್ಯವಸ್ಥಾಪನ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಗಣೇಶ ಸಣ್ಣಲಿಂಗಣ್ಣನ್ನವರ, ಅಧ್ಯಕ್ಷರಾಗಿ ಗಜಾನನ ಗೌಡ ಉಪಾಧ್ಯಕ್ಷರಾಗಿ ಬೀಬಿ ಆಯಿಷಾ ಖಾನ್, ಜ್ಯೋತಿ ಚನ್ನಯ್ಯ, ಅಶೋಕ ನಾಯ್್ಕ ನಾಗರಾಜ ಉಪ್ಪಾರ, ಕಾರ್ಯದರ್ಶಿಗಳಾಗಿ ಯೋಜನಾಧಿಕಾರಿ ರಾಘವೇಂದ್ರ ನಾಯ್್ಕ ಕೋಶಾಧಿಕಾರಿಗಳಾಗಿ ರವೀಶ ಹೆಗಡೆ, ಸುಧೀರ ನಾಯರ್, ಸಹ ಕಾರ್ಯದರ್ಶಿಗಳಾಗಿ ಸಾಯಿರಾಂ ಕಾನಳ್ಳಿ, ಶಿವಕುಮಾರ ದೇಸಾಯಿ ಗೌಡ ಹಾಗೂ ಸಭೆಯಲ್ಲಿ ಉಪಸ್ಥಿತರಿದ್ದ ಸರ್ವರನ್ನು ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.