ಜಿಲ್ಲೆ

ನವರೂಪದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮೀ

ಚಿತ್ರದುರ್ಗ: ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ ದೇಗುಲದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಲು ಭಕ್ತಮಂಡಳಿ ಹಾಗೂ ದೇಗುಲ ಸೇವಾ ಟ್ರಸ್ಟ್ ನಿರ್ಧರಿಸಿದೆ.

ಗುರುವಾರ ಶೈಲಾಪುತ್ರಿ ರೂಪದಲ್ಲಿ ದೇವಿಯನ್ನು ಅಲಂಕರಿಸಲಾಗಿತ್ತು. ಅ. 4ರಂದು ಬ್ರಹ್ಮಚಾರಿಣಿ, 5-ಚಂದ್ರಘಂಟಾ, 6-ಕೂಷ್ಮಾಂಡಾ, 7-ಸ್ಕಂದ ಮಾತೆ, 8-ಕಾತ್ಯಾಯನಿ, 9-ಮಾತೆ ಮಹಾ ಸರಸ್ವತಿ, 10-ಕಾಳಿಮಾತೆ, 11-ಧನಲಕ್ಷ್ಮೀ ಹೀಗೆ… ನವರೂಪದಲ್ಲಿ ಅಲಂಕಾರ ಸೇವೆ ನಡೆಯಲಿದೆ. 12ರಂದು ದೇವಿ ಮೂರ್ತಿಗೆ ಪುಷ್ಪಾಲಂಕಾರ ನೆರವೇರಲಿದೆ. ನಂತರ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಬನ್ನಿಪೂಜೆ ಜರುಗಲಿದೆ ಎಂದು ದೇಗುಲದ ಟ್ರಸ್ಟ್ ತಿಳಿಸಿದೆ.