ಬಾಗಲಕೋಟೆ: ಬಸವೇಶ್ವರ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಂದ ದೇಶಿ ನೃತ್ಯ ಪ್ರದರ್ಶನ ಜರುಗಿತು, ಮಂಗಳವಾರ ನಗರದ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಿಂದ ನವರಾತ್ರಿ ನಿಮಿತ್ತ ದೇಶಿ ನೃತ್ಯ ಪ್ರದರ್ಶನ ಜರುಗಿತು.
ವಿದ್ಯಾರ್ಥಿನಿಯರ ೫ ತಂಡಗಳಿಂದ ದಾಂಡಿಯಾ, ಸೇರಿದಂತೆ ಸಮೂಹ ದೇಶಿ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ, ಡಾ.ಎಂ.ನಂಜುಂಡಸ್ವಾಮಿ, ಐಕ್ಯೂಎಸಿ ಸಂಯೋಜಕಿ ಜಿ.ಎಂ.ನಾವದಗಿ, ಪ್ರಿಯಾಂಕ ಮಠದ ಇದ್ದರು.