ಬಾಗಲಕೋಟೆ ಮುಳಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಬಿಟಿಡಿಎ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. 
ಜಿಲ್ಲೆ

ನವನಗರ ಯೂನಿಟ್-೨ ಗೆ ಮೂಲ ಸೌಕರ್ಯ ಒದಗಿಸಿ

ಬಾಗಲಕೋಟೆ: ನವನಗರದ ಯೂನಿಟ್-೨ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಮುಳಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಬಿಟಿಡಿಎ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಯೂನಿಟ್-೨ ರಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸ್ ಠಾಣೆ ಸ್ಥಾಪಿಸಬೇಕು. ಗಸ್ತು ಹೆಚ್ಚಿಸಬೇಕು, ಕುಡಿಯುವ ನೀರು ಸಮರ್ಪಕವಾಗಿ ಪೂರೈಸಬೇಕು, ವಿದ್ಯುತ್ ದೀಪ ವ್ಯವಸ್ಥೆ ಸರಿ ಮಾಡಬೇಕು, ಬಹುತೇಕ ಭಾಗಗಳಲ್ಲಿ ಮುಳ್ಳಿನ ಜಾಲಿ ಕಂಟೆ ಬೆಳೆದು ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತಿದ್ದು, ಅವುಗಳನ್ನು ಕೂಡಲೇ ಸ್ವಚ್ಛತೆ ಮಾಡಬೇಕು, ಆಸ್ಪತ್ರೆ ಸ್ಥಾಪಿಸಬೇಕು, ಸಾರಿಗೆ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಸಂಗಯ್ಯ ಸರಗಣಾಚಾರಿ. ಕಾರ್ಯಾಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಪ್ರಧಾನ ಕಾರ್ಯದರ್ಶಿ ಸುರೇಶ ಮಜ್ಜಿಗಿ, ಉಪಾಧ್ಯಕ್ಷರು ಗುಂಡೂರಾವ ಶಿಂಧೆ, ಮುಖಂಡರಾದ ಶ್ರೀನಾತ ಸಜ್ಜನ, ರಮೇಶ ಕೋಟಿ, ಖಜಾಂಚಿ ಬಸವರಾಜ ಕುಪ್ಪಸ, ನಗರಸಭೆ ಅಧ್ಯಕ್ಷ ಸವಿತಾ ಲೆಂಕೆನವರ, ಉಪಾಧ್ಯಕ್ಷೆ ಶೋಭಾ ರಾವ, ಸಭಾಪತಿ ಯಲ್ಲಪ್ಪ ನಾರಾಯಣಿ, ಶಶಿಕಲಾ ಮಜ್ಜಿಗಿ ಇತರರು ಇದ್ದರು.