ಹುಮನಾಬಾದ್: ನವದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವವದಲ್ಲಿ ಸೆ.೩೦ರಂದು ನಡೆಯಲಿರುವ ನೀತಿ ಆಯೋಗದ ಸಂಕಲ್ಪ ಸಪ್ತಾಹ ಕಾರ್ಯಕ್ರಮಕ್ಕೆ ತಾಲೂಕಿನ ಧುಮ್ಮನಸೂರ ಗ್ರಾಪಂ ಅಧ್ಯಕ್ಷ ವೀರಪ್ಪ ಭೂತಾಳೆ, ತಾಪಂ ನರೇಗಾ ಯೋಜನಾ ಅಧಿಕಾರಿ ಜಗನ್ನಾಥ ಎಂ.ಬಿ. ನಾಮನಿರ್ದೇಶಿತರಾಗಿದ್ದಾರೆ. ಈ ಕುರಿತು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ನಿರ್ದೇಶಕರಿಂದ ಅಧಿಕೃತ e್ಞÁಪನ ಪತ್ರದ ಮೂಲಕ ಆದೇಶಿಸಲಾಗಿದೆ. ಮಹತ್ವದ ಕಾರ್ಯಕ್ರಮದಲ್ಲಿ ಧುಮ್ಮನಸೂರ ಗ್ರಾಮದ ಅಧ್ಯP್ಷÀರು ಪಾಲ್ಗೊಳ್ಳುತ್ತಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿz್ದÁರೆ.