ಜಿಲ್ಲೆ

ನವದುರ್ಗೆಯರಿಗೆ ವಿಶೇಷಾಲಂಕಾರ

ಚಿತ್ರದುರ್ಗ: ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಗಳಾದ ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಸಾವಿರಾರು ಮಣಿ, ನೂರಾರು ಬಾಳೆ ಕಾಯಿ, ಹಣ್ಣುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು.

ಕೋಟೆ ರಸ್ತೆಯ ಉಚ್ಚಂಗಿಯಲ್ಲಮ್ಮ ದೇವಿಗೆ ನಿಂಬೆ ಹಣ್ಣುಗಳಿಂದ, ನಗರ ಮತ್ತು ಕುಂಚಿಗನಾಳ್ ಕಣಿವೆಮಾರಮ್ಮ ದೇವಿಗೆ ವಿವಿಧ ಬಗೆಯ ಪುಷ್ಪಗಳಿಂದ, ಸ್ವಾಮಿ ವಿವೇಕಾನಂದ ನಗರದ ನಿಮಿಷಾಂಭ ದೇವಿಗೆ ಗೋಡಂಬಿ, ಬಾದಾಮಿಯಿಂದ, ಕಾಳಿಕಾಮಠೇಶ್ವರಿ ದೇವಿಗೆ ತರಕಾರಿಗಳಿಂದ ಅಲಂಕಾರ ಸೇವೆ ಜರುಗಿತು.