ಚಿಕ್ಕಬಳ್ಳಾಪುರ : ತಾಲೂಕಿನ ಹುನೇಗಲ್‌ನಲ್ಲಿನ ಶ್ರೀ ರಂಗನಾಥ ಸ್ವಾಮಿ ಆಲಯದಲ್ಲಿನ ನವಗ್ರಹ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಆಲಯದ ಆವರಣದಲ್ಲಿ ಗ್ರಾಮದ ವೆಂಕಟೇಶಪ್ಪ ಎಂಬುವರ ನೇತೃತ್ವದಲ್ಲಿ ನವಗ್ರಹ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ವಿಶೇಷ ದಿನಗಳಂದು ಧಾರ್ಮಿಕ ಸಂಪ್ರದಾಯದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದರು. ಇದರ ನಡುವೆ ನಾಲ್ಕು ದಿನಗಳ ಹಿಂದೆ ನವಗ್ರಹ ವಿಗ್ರಹವನ್ನು ಧ್ವಂಸಗೊಳಿಸಿ ಬಿಸಾಡಲಾಗಿದೆ. ಆದರೆ, ಇದರ ಬಗ್ಗೆ ಮಾಹಿತಿ ಇದ್ದರೂ ಅರ್ಚಕ ರಾಮಚಾರಿ ಬಾಯಿ ಬಿಟ್ಟಿಲ್ಲ ಎನ್ನಲಾಗಿದೆ. ಗ್ರಾಮದ ಪ್ರಮುಖರು ಆಲಯಕ್ಕೆ ಭೇಟಿ ನೀಡಿದಾಗ ಮೂರ್ತಿಗಳು ಧ್ವಂಸವಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.