ಬೇಲೂರು: ಕಳೆದೆರೆಡು ದಿನಗಳಿಂದ ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕೇಂದ್ರದ ಇಂಧನ ಹಾಗೂ ಬೃಹತ್ ಕೈಗಾರಿಕೆ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್, ಮಂಗಳವಾರ ಕ್ಷೇತ್ರದ ಪ್ರವಾಸ ಮುಗಿಸಿ ಬೇಲೂರಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನವ ಹಾಗೂ ಯುವ ಮತದಾರರೊಂದಿಗೆ ಸಂವಾದ ನಡೆಸಿ ಅವರ ಅಭಿಪ್ರಾಯ ಆಲಿಸಿದರು.
ಸರ್ಕಾರದ ಯೋಜನೆಗಳು ಅದರ ಅನು?್ಠಾನದ ಸ್ವರೂಪ, ಶಿಕ್ಷಣ, ವಿದೇಶಾಂಗ ನೀತಿ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕೇಂದ್ರ ಸಚಿವರಿಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಅಭಿಪ್ರಾಯ ಮಂಡಿಸಿದರು. ಎಲ್ಲ ವಿದ್ಯಾರ್ಥಿಗಳ ಪ್ರಶ್ನೆ ಹಾಗೂ ಅಭಿಪ್ರಾಯ ಆಲಿಸಿದ ಕೇಂದ್ರ ಸಚಿವರು ಯುವ ಸಮುದಾಯಕ್ಕೆ ಪ್ರೇರಣಾ ಪೂರ್ವಕವಾಗಿ ಉತ್ತರ ನೀಡಿದರು.
ಸಂವಾದದಲ್ಲಿ ವೈಡಿಡಿ ಕಾಲೇಜಿನ ವಿದ್ಯಾರ್ಥಿನಿ ಹೆಚ್.ಎಂ.ಅನುಷ, ಹೊಸ ಶಿಕ್ಷಣ ನೀತಿಯಲ್ಲಿ ಡಿಜಿಟಲ್ ವ್ಯವಸ್ಥೆ, ಲ್ಯಾಪ್ ಟ್ಯಾಪ್ ಬಳಕೆ ಕುರಿತು ಅಭಿಪ್ರಾಯ ಮಂಡಿಸಿದರು. ವಿದ್ಯಾರ್ಥಿನಿ ಎಂ.ಪಿ.ಸ್ಮಿತಾ, ಲ್ಯಾಪ್‌ಟ್ಯಾಪ್ ಹಿಂದೆ ಉಚಿತವಾಗಿ ನೀಡಲಗುತ್ತಿದ್ದು ಈಗ ನಿಲ್ಲಿಸಲಾಗಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ ಎಂದರು.
ವಿದ್ಯಾರ್ಥಿ ಎಸ್.ದರ್ಶನ್, ಎನ್‌ಇಪಿ ಸರ್ಪಡೆ ಬಗ್ಗೆ ಪ್ರಶ್ನಿಸಿದರು. ಎನ್.ಪಿ.ದರ್ಶನ್ ವಿದ್ಯಾಭ್ಯಾಸದಲ್ಲಿ ಸಮಾನತೆ ಇರಬೇಕು. ಪರಿಶಿ?್ಟಜಾತಿ, ವರ್ಗದವರಿಗೆ 600 ರೂ. ಶುಲ್ಕವಿದ್ದರೆ, ಓಬಿಸಿಯವರಿಗೆ 4 ರಿಂದ 5 ಸಾವಿರ ರೂ. ಶುಲ್ಕ ಬರುತ್ತದೆ. ಪರಿಶಿ?್ಟರಿಗೆ 20 ಸಾವಿರ ರೂ. ಸ್ಕಾಲರ್‌ಶಿಪ್ ಬಂದರೆ ಓಬಿಸಿಯವರಿಗೆ 3 ರಿಂದ 4 ಸಾವಿರ ಬರುತ್ತದೆ. ಎಲ್ಲದರಲ್ಲೂ ಸಾಕ?್ಟು ವ್ಯತ್ಯಾಸವಿದೆ. ವಿದ್ಯೆ ಕಲಿಯುವಾಗ ಈ ತಾರತಮ್ಯ ಸರಿಯಲ್ಲ ಎಲ್ಲರಿಗೂ ಒಂದೆ ರೀತಿ ಮಾಡಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿ ಜಯಕುಮಾರ್ ಕ್ರೀಡಾಪಟುಗಳು, ಕ್ರೀಡಾ ಸಾಮಾಗ್ರಿಗಳಿದ್ದರೂ ನುರಿತ ದೈಹಿಕ ಅಧೀಕ್ಷರಿಲ್ಲ. ಗ್ರಂಥಾಲಯವಿದ್ದರೂ ಗ್ರಂಥಾಲಯಧಿಕಾರಿ ಇಲ್ಲ. ನೇಮಕ ಮಾಡುವಂತೆ ಕೋರಿದರು.
ವಿದ್ಯಾರ್ಥಿನಿ ನಾಗರತ್ನ, ಪರಿಶಿ?್ಟರಿಗೆ ನಿಗಧಿಪಡಿಸಿರುವುದಕ್ಕಿಂತ ಹೆಚ್ಚು ಶುಲ್ಕ ಪಡೆಯಲಾಗುತ್ತಿದೆ ಇದು ಎಷ್ಟು ಸರಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದೊಡ್ಡ ಬದಲಾವಣೆ ತಂದಾಗ ಆರಂಭದಲ್ಲಿ ಕೆಲವೊಂದು ಸಮಸ್ಯೆಯಾಗುತ್ತದೆ. ಕಾಲೇಜಿನಲ್ಲಿ ಉಪಕರಣದ ಕೊರತೆ ಬಗೆಹರಿಸಲಾಗುವುದು. ಪರೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಆನ್ ಲೈನ್‌ನಲ್ಲಿ ಆಗುತ್ತಿಲ್ಲ, ಆಫ್ ಲೈನ್‌ನಲ್ಲೂ ಆಗುತ್ತಿದೆ. ಭಾರತ ದೊಡ್ಡ ದೇಶವಾಗಿರುವುದರಿಂದ ಉಚಿತವಾಗಿ ಎಲ್ಲರಿಗೂ ಲ್ಯಾಪ್‌ಟ್ಯಾಪ್ ಕೊಡಲು ಸದ್ಯಕ್ಕೆ ಕ?್ಟ ಎಂದರು. ಎನ್‌ಇಪಿ ಶಿಕ್ಷಣದಿಂದ ಸರಕಾರಿ, ಖಾಸಗಿ ಕೆಲಸದ ಜೊತೆಗೆ ಸ್ವ ಉದ್ಯೋಗ ಕ್ಕೆ ಸಹಕಾರಿ ಆಗಲಿದೆ. ಇದು ಪ್ರಧಾನಿ ನರೇಂದ್ರಮೋದಿ ಅವರ ಬಹುದೊಡ್ಡ ಕನಸು. ಎನ್‌ಇಪಿ ಶಿಕ್ಷಣದಲ್ಲಿ ಯೋಗ ಇನ್ನಿತರ ಶಿಕ್ಷಣ ಸೇರಿಸುವ ವಿ?ಯದಲ್ಲಿ ಗಮನ ಹರಿಸಲಾಗುವುದು. ಪರಿಶಿ?್ಟಜಾತಿ ವರ್ಗದವರಿಂದ ಹೆಚ್ಚು ಪಡೆಯಲಾಗುತ್ತಿರುವ ಶುಲ್ಕವು ನಂತರದ ದಿನದಲ್ಲಿ ವಿದ್ಯಾರ್ಥಿಗಳ ಖಾತೆಗೆ ಜಮೆ ಆಗಲಿದೆ ಎಂದರು. ಪರಿಶಿ?್ಟರ?್ಟೇ ಅಲ್ಲದೆ ಎಲ್ಲಾ ಜಾತಿಯಲ್ಲಿಯೂ ಬಡವರಿದ್ದಾರೆ ಎಂಬ ಕಾರಣದಿಂದಲೇ ಪ್ರಧಾನಿ ನರೇಂದ್ರಮೋದಿ ಅವರು, ಮುಂದುವರಿದ ವರ್ಗದ ಬಡವರಿಗೆ ಶೇ.10 ಮೀಸಲಾತಿ ತಂದಿದ್ದಾರೆ. ಇದರಿಂದ ಭವಿ?್ಯದಲ್ಲಿ ಅನುಕೂಲ ಆಗಲಿದೆ. ದೈಹಿಕ ಶಿಕ್ಷಣ ಅಧೀಕ್ಷಕ, ಗ್ರಂಥಾಲಯಾಧಿಕಾರಿ ನೇಮಕ ರಾಜ್ಯ ಸರಕಾರದ್ದು, ಈ ಬಗ್ಗೆ ಸಂಬಂಧಿಸಿದ ಸಚಿವರಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಅರ್ಚನ, ಜಿಪಂ ಸಿಇಒ ಕಾಂತರಾಜು, ತಹಸೀಲ್ದಾರ್ ರಮೇಶ್, ತಾಪಂ ಇಒ ಸುನಿತಾ, ವೈಡಿಡಿ ಕಾಲೇಜು ಪ್ರಾಂಶುಪಾಲ ಪುಟ್ಟರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್, ಮಾಜಿ ಸಚಿವರಾದ ವಿಜಯಶಂಕರ್, ಪುರಸಭೆ ಸದಸ್ಯ ಪ್ರಭಾಕರ್, ಪ್ರಮುಖರಾದ ರೇಣುಕುಮಾರ್, ಕೊರಟಿಕೆರೆ ಪ್ರಕಾಶ್, ಸಂತೋ?್ ಕೆಂಚಾಂಬ, ವಿನಯ್, ಶೇಖರ್, ಚೇತನಕುಮಾರ್, ದರ್ಶನ್ ಸೇರಿದಂತೆ ಇತರರಿದ್ದರು.