ಜಿಲ್ಲೆ

ನವ ವಿವಾಹಿತರು ನೇಣಿಗೆ ಶರಣು, ಪ್ರೀತಿಸಿ ಮದುವೆಯಾದವರಿಗೆ ಅಂಥದ್ದೇನಾಗಿತ್ತು?

ವಿಜಯಪುರ: ಮೆಚ್ಚಿ, ಪ್ರೀತಿಸಿ, ಮದುವೆಯಾಗಿದ್ದ ನವ ಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿದೆ.

ನಗರದ ಹೊರ ವಲಯದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯೊಂದರಲ್ಲಿ ಬುಧವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯ ನಿವಾಸಿಗಳಾದ
ಮನೋಜಕುಮಾರ ಪೋಳ (30) ಹಾಗೂ ರಾಖಿ (23) ನೇಣಿಗೆ ಶರಣಾದವರು‌.

ಕಳೆದ ನಾಲ್ಕು ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಇವರು
ಮಂಗಳವಾರ ತಡರಾತ್ರಿ ಊಟ ಮಾಡಿದ ಬಳಿಕ ನೇಣಿಗೆ ಶರಣಾಗಿರಬಹುದೆಂದು ಅಂದಾಜಿಸಲಾಗಿದೆ.

ಮನೋಜಕುಮಾರ ಹಾಗೂ ರಾಖಿ ಇಬ್ಬರೇ ಮನೆಯಲ್ಲಿದ್ದರು.
ಮನೋಜಕುಮಾರ ತಾಯಿ ಭಾರತಿ ಮಗಳ ಊರಿಗೆ ಹೋಗಿದ್ದರು. ಬುಧವಾರ ಬೆಳಗ್ಗೆ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.