ಶೃಂಗೇರಿ ತಾಲೂಕಿನ ಸ್ವಸಹಾಯ ಸಂಘದ ಮಹಿಳೆಯರಿಗೆ ತಾಪಂನಲ್ಲಿ ನರೇಗಾ ಯೋಜನೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಸೌಮ್ಯಾ, ಚೈತ್ರಾ, ಸುಪ್ರೀತಾ ಇತರರಿದ್ದರು. 
ಜಿಲ್ಲೆ

ನರೇಗಾದಲ್ಲಿ ವೈಯಕ್ತಿಕ ಕಾಮಗಾರಿಗೆ ಅವಕಾಶ

ಶೃಂಗೇರಿ: ತಾಲೂಕಿನ ಸ್ವಸಹಾಯ ಸಂಘದ ಮಹಿಳೆಯರಿಗೆ ತಾಪಂನಲ್ಲಿ ಬುಧವಾರ ನರೇಗಾ ಯೋಜನೆ ಕುರಿತು ವಿಶೇಷ ಕಾರ್ಯಾಗಾರ ನೆರವೇರಿತು.

ಕಾರ್ಯಾಗಾರದಲ್ಲಿ ತಾಲೂಕು ಐಇಸಿ ಸಂಯೋಜಕಿ ಸೌಮ್ಯಾ ಮಾತನಾಡಿ, ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು. ವೈಯಕ್ತಿಕ ಫಲಾನುಭವಿಗಳು ಐದು ಲಕ್ಷ ರೂಪಾಯಿವರೆಗೆ ಕಾಮಗಾರಿಗಳ ಸೌಲಭ್ಯ ಪಡೆಯಲು ಅರ್ಹರಿದ್ದು, ಸಮಾನ ಕೂಲಿ 349 ರೂ. ನೀಡಲಾಗುತ್ತದೆ. ಫಲಾನುಭವಿಗಳೇ ಕ್ಯೂಆರ್ ಕೋಡ್ ಬಳಸಿ ಕಾಮಗಾರಿ ಹೆಸರು ನಮೂದಿಸಬಹುದು. 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಕಾಮಗಾರಿಗಳಾದ ಕೃಷಿಬಾವಿ, ಕುರಿ ಶೆಡ್, ಹಂದಿ ಶೆಡ್ ನಿರ್ಮಿಸಲು ಅನುದಾನ ನೀಡಲಾಗುತ್ತಿದೆ ಎಂದರು. ತಾಪಂ ಇಒ ಎಚ್.ಸುದೀಪ್, ಸಂಜೀವಿನಿ ಎನ್‌ಆರ್‌ಎಂಎಂ ತಾಲೂಕು ವ್ಯವಸ್ಥಾಪಕ ಆದರ್ಶ ಇದ್ದರು.