Exif_JPEG_420 
ಜಿಲ್ಲೆ

ನರೇಗಾ ಸದ್ಬಳಕೆ ಮಾಡಿಕೊಳ್ಳಿ

ಬಸವಕಲ್ಯಾಣ: ನರೇಗಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಪ್ರತಿಯೊಬ್ಬರೂ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್ ಹೇಳೀದರು.

ಕಿಟ್ಟಾ ಗ್ರಾಮದಲ್ಲಿ ಗುರುವಾರ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಹಾಗೂ ಮನೆ ಮನೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ೨೦೨೪-೨೫ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಒಂದು ಕುಟುಂಬದ ಜೀವಿತಾವಧಿಗೆ ವೈಯಕ್ತಿಕ ಕಾಮಗಾರಿಗಾಗಿ ೨.೫ ಲಕ್ಷ ರೂ. ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರ ಐದು ಲಕ್ಷ ರೂ.ಗೆ ಹೆಚ್ಚಿಸಿದೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಕಾಮಗಾರಿ ಪೆಟ್ಟಿಗೆಯಲ್ಲಿ ಹೆಸರು, ಕಾಮಗಾರಿ ಬರೆದು ಹಾಕಬೇಕು ಎಂದು ಸಲಹೆ ನೀಡಿದರು.

ತಾಲೂಕು ಸಾಮಾಜಿಕ ಪರಿಶೋಧಕ ಕಾರ್ಯಕ್ರಮ ವ್ಯವಸ್ಥಾಪಕ ಗುರುರಾಜ ಮಾಕಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯ ಗ್ರಾಮ ಸಭೆಯಲ್ಲಿ ಭಾಗವಹಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಐಇಸಿ ಸಂಯೋಜಕ ವೀರಾರೆಡ್ಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಜುರೆಡ್ಡಿ ಕುದಗೆ ಅಭಿಯಾನಕ್ಕೆ ಚಾಲನೆ ನೀಡಿದರು. ಪಿಡಿಒ ರಿಜ್ವಾನ್ ಮಹೇಬೂಬ್, ಡಿಇಒ ಸುರೇಶ, ಸದಸ್ಯರಾದ ಸುರೇಶ ಟೋಣ್ಣೆ, ಶಕುಂತಲಾ ಬಿರಾದಾರ, ರಾಮಲಿಂಗ ಮಾರ್ಥಂಡ, ಸುರೇಶ ಗಾಯಕವಾಡ, ಸಂದೀಪ ಫೂಲೆ, ಮಹಾದೇವ ಬಾಲಕುಂದಾ, ಗುರುನಾಥ ಪರತಾಪುರೆ, ವಿಶಾಲರೆಡ್ಡಿ ಕಲ್ಲೂರೆ ಇತರರಿದ್ದರು.