ಹಣಬರಹಟ್ಟಿ ಹಟ್ಟಿ ಕಣಿವೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನರೇಗಾ ಕಾರ್ಮಿಕರನ್ನು ಗೌರವಿಸಲಾಯಿತು. ಶಾಸಕ ಮಹಾಂತೇಶ ದೊಡಗೌಡರ, ಬಿ.ಎಫ್.ಕೊಳದೂರ, ಸುಭಾಷ ಸಂಪಗಾವಿ, ವಿಜಯ ಪಾಟೀಲ, ಬಸವರಾಜ ವಾಳದ, ಶ್ರೀಧರ ಯರಡಾಲ, ನಾಗೇಶ ಮಲ್ಲಾಡಿ ಇತರರು ಇದ್ದರು. 
ಜಿಲ್ಲೆ

ನರೇಗಾ ಯೋಜನೆಯ ಲಾಭ ಪಡೆಯಿರಿ

ನೇಸರಗಿ: ಗ್ರಾಮೀಣ ಭಾಗದ ಪ್ರತಿ ಕೂಲಿಕಾರ್ಮಿಕರು ನರೇಗಾದ ಲಾಭ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ.

ಸಮೀಪದ ಹಣಬರಹಟ್ಟಿ ಗ್ರಾಮದ ಹಟ್ಟಿ ಕಣಿವೆಯಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ನರೇಗಾ ದಿವಸ-2022 ಅಂಗವಾಗಿ ಭಾನುವಾರ ನರೇಗಾ ಯೋಜನೆಯಡಿ 100
ಮಾನವ ದಿನಗಳನ್ನು ಪೂರೈಸಿದ ಕುಟುಂಬಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ದುಡಿಯುತ್ತಿರುವ ಕೂಲಿ-ಕಾರ್ಮಿಕರ ಏಳ್ಗೆಯೇ ನಮ್ಮ ಸರ್ಕಾರದ ಪ್ರಮುಖ ಆಶಯವಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಯೋಜನೆ ಅನುಕೂಲವಾಗಿದೆ. ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಹೆಚ್ಚುವರಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಬಿ.ಎಫ್.ಕೊಳದೂರ, ಎ.ಆರ್.ಮಾಳಣ್ಣವರ, ಎಸ್.ಎಂ.ಪಾಟೀಲ, ತಾಪಂ ಇಒ ಸುಭಾಷ ಸಂಪಗಾವಿ, ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ(ಎಡಿ), ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ, ಸುರೇಶ ದೊಡ್ಡಬಸಣ್ಣವರ, ಕೃಷಿ ಅಧಿಕಾರಿ ಆರ್.ಐ.ಕುಂಬಾರ, ಪಿಡಿಒ ಶಿವಾನಂದ ಕಲ್ಲೂರ, ಗ್ರಾಪಂ ಅಧ್ಯಕ್ಷ ಪ್ರಕಾಶ ಬಡವಣ್ಣವರ, ಉಪಾಧ್ಯಕ್ಷೆ ಚೈತ್ರಾ ಖೋದಾನಪುರ, ಲಕ್ಷ್ಮಣ ಮಾರೀಹಾಳ, ಸಂತೋಷ ಗೋವಿ, ಲಕ್ಷ್ಮೀ ತಳವಾರ, ಶ್ರೀಧರ ಯರಡಾಲ, ನಾಗೇಶ ಮಲ್ಲಾಡಿ, ಸಂಜಯ, ಲಕ್ಷ್ಮಣ ಮಾಸ್ತಮರ್ಡಿ, ಶಿವಮೂರ್ತಿ ಹಿರೇಮಠ, ಲಕ್ಷ್ಮಣ ಮಾರೀಹಾಳ ಇದ್ದರು.